ರೋಹಿತ್ ಶರ್ಮಾ ಈ ಬಾರಿ ಬಿಗ್ ಇನಿಂಗ್ಸ್ ಆಡಲಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ

Krishnaveni K

ಗುರುವಾರ, 28 ನವೆಂಬರ್ 2024 (09:55 IST)
ಅಡಿಲೇಡ್: ಪತ್ನಿಯ ಹೆರಿಗೆಯಾದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ತಂಡವನ್ನು ಕೂಡಿಕೊಂಡಿರುವ ನಾಯಕ ರೋಹಿತ್ ಶರ್ಮಾ ಈ ಬಾರಿ ದೊಡ್ಡ ಮೊತ್ತ ಸ್ಕೋರ್ ಮಾಡಲಿದ್ದಾರೆ. ಅದಕ್ಕೆ ಕಾರಣವೂ ಇದೆ.

ಅಡಿಲೇಡ್ ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ಶರ್ಮಾ ಲಭ್ಯರಿರಲಿದ್ದಾರೆ. ಇದಕ್ಕೆ ಮೊದಲು ಅವರು ಮೊದಲ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದರು. ಆದರೆ ಈ ಸರಣಿ ಮಹತ್ವದ್ದಾಗಿರುವುದರಿಂದ ರೋಹಿತ್ ಆಸ್ಟ್ರೇಲಿಯಾಗೆ ಬಂದ ತಕ್ಷಣವೇ ಅಭ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ನಡುವೆ ಅಂಕಿ ಅಂಶವೊಂದು ಅವರು ಈ ಬಾರಿ ದೊಡ್ಡ ಇನಿಂಗ್ಸ್ ಒಂದನ್ನು ಆಡಲಿದ್ದಾರೆ ಎನ್ನುತ್ತಿದೆ. ಅದಕ್ಕೆ ಕಾರಣ ಈ ರೋಹಿತ್ 2016 ರಲ್ಲಿ ರಿತಿಕಾ ಮದುವೆಯಾದ  ಬಳಿಕ ಆಸ್ಟ್ರೇಲಿಯಾದಲ್ಲಿ ಮೊದಲ ಪಂದ್ಯವಾಡಿದ್ದರು. ಆ ಏಕದಿನ ಪಂದ್ಯದಲ್ಲಿ ರೋಹಿತ್ 171  ರನ್ ಗಳ ಇನಿಂಗ್ಸ್ ಆಡಿದ್ದರು.

ಅದಾದ ಬಳಿಕ 2019 ರಲ್ಲಿ ಮಗಳು ಸಮೈರಾ ಹುಟ್ಟಿದ ಬಳಿಕ ರೋಹಿತ್ ಮತ್ತೆ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದ್ದರು. ಆಗಲೂ ಏಕದಿನ ಪಂದ್ಯದಲ್ಲಿ ರೋಹಿತ್ 133 ರನ್ ಬಾರಿಸಿದ್ದರು. ಈ ರೀತಿ ಪ್ರತೀ ಬಾರಿ ವೈಯಕ್ತಿಕ ಜೀವನದಲ್ಲಿ ಒಂದು ಮಹತ್ವದ ಸಮಯದಲ್ಲೇ ರೋಹಿತ್ ಆಸೀಸ್ ಪ್ರವಾಸ ಮಾಡಿದಾಗಲೆಲ್ಲಾ ದೊಡ್ಡ ಮೊತ್ತ ಸ್ಕೋರ್ ಮಾಡಿದ್ದಾರೆ. ಹೀಗಾಗಿ ಈ ಬಾರಿಯೂ ರೋಹಿತ್ ದೊಡ್ಡ ಮೊತ್ತ ಗಳಿಸಲಿದ್ದಾರೆ ಎಂಬುದು ಅಭಿಮಾನಿಗಳ ನಿರೀಕ್ಷೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ