ಒಡಿಶಾ ರೈಲು ಅಪಘಾತ ಸಂತ್ರಸ್ತರಿಗೆ ಕೊಹ್ಲಿ 30 ಕೋಟಿ ಕೊಡ್ತಾರಂತೆ!

ಮಂಗಳವಾರ, 6 ಜೂನ್ 2023 (09:00 IST)
ನವದೆಹಲಿ: ಜಗತ್ತಿನ ಶ್ರೀಮಂತ ಕ್ರಿಕೆಟಿಗರಲ್ಲೊಬ್ಬರಾದ ವಿರಾಟ್ ಕೊಹ್ಲಿ ಒಡಿಶಾದಲ್ಲಿ ಇತ್ತೀಚೆಗೆ ಸಂಭವಿಸಿದ ರೈಲು ಅಪಘಾತದ ಸಂತ್ರಸ್ತರ ನೆರವಿಗೆ 30 ಕೋಟಿ ರೂ. ದೇಣಿಗೆ ನೀಡುತ್ತಾರಂತೆ! ಹೀಗೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಕೊಹ್ಲಿ ಘಟನೆ ಬಗ್ಗೆ ಸಂತಾಪ ವ್ಯಕ್ತಪಡಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಈ ಘಟನೆ ನನಗೆ ಆಘಾತ ತಂದಿದೆ ಎಂದಿದ್ದರು. ಇದರ ಬೆನ್ನಲ್ಲೇ ಕೊಹ್ಲಿ 30 ಕೋಟಿ ದೇಣಿಗೆ ನೀಡುತ್ತಾರೆ ಎಂಬ ಸುದ್ದಿ ಹರಿದಾಡಿದೆ.

ಆದರೆ ಇದು ಅಸಲಿ ಸುದ್ದಿಯಲ್ಲ. ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯೂ ಇಲ್ಲ. ಯಾರೋ ಕೊಹ್ಲಿ ಬಗ್ಗೆ ಹೀಗೊಂದು ಸುದ್ದಿ ಹರಿಯಬಿಟ್ಟಿದ್ದಾರಷ್ಟೇ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ