ಇಂದಿನ ಏಕದಿನ ಪಂದ್ಯಕ್ಕೆ ದ.ಆಫ್ರಿಕಾ ಆಟಗಾರರ ಜೆರ್ಸಿ ಕಲರ್ ಬದಲಾವಣೆ! ಕಾರಣವೇನು ಗೊತ್ತಾ?!

ಶನಿವಾರ, 10 ಫೆಬ್ರವರಿ 2018 (09:56 IST)
ವಾಂಡರರ್ಸ್: ಭಾರತ-ದ.ಆಫ್ರಿಕಾ ನಡುವಿನ ನಾಲ್ಕನೇ ಏಕದಿನ ಪಂದ್ಯಕ್ಕೆ ವಾಂಡರರ್ಸ್ ಕ್ರೀಡಾಂಗಣ ಸಜ್ಜಾಗಿದೆ. ಈ ಪಂದ್ಯದಲ್ಲಿ ಆಫ್ರಿಕಾ ಆಟಗಾರರು ಪಿಂಕ್ ಜೆರ್ಸಿ ತೊಟ್ಟು ಆಡಲಿದ್ದಾರೆ. ಅದರ ಹಿಂದಿನ ಮರ್ಮವೇನು ಗೊತ್ತಾ?!
 

ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಈ ಪಂದ್ಯವನ್ನು ಪಿಂಕ್ ಏಕದಿನ ಪಂದ್ಯವಾಗಿ ಆಡಲಾಗುತ್ತಿದೆ. ಇದೇ ಕಾರಣಕ್ಕೆ ಆಫ್ರಿಕಾ ಆಟಗಾರರು ಪಿಂಕ್ ಜೆರ್ಸಿ ತೊಟ್ಟು ಆಡಲಿದ್ದಾರೆ. ಇದೇ ರೀತಿ ಹಿಂದೆಯೂ ಆಫ್ರಿಕಾ ಆಟಗಾರರು ಪಿಂಕ್ ಜೆರ್ಸಿ ತೊಟ್ಟು ಆಡಿದ್ದರು.

ವಿಶೇಷವೆಂದರೆ ಪಿಂಕ್ ಜೆರ್ಸಿ ತೊಟ್ಟು ಆಡಿದಾಗಲೆಲ್ಲಾ ಆಫ್ರಿಕಾ ಸೋತಿಲ್ಲ. ಇಂದು ಸರಣಿ ಉಳಿಸಿಕೊಳ್ಳಬೇಕಾದರೆ ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿರುವ ಆಫ್ರಿಕಾ ಪಿಂಕ್ ಲಕ್ ಕೈ ಹಿಡಿಯುತ್ತಾ ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ