ಮಹಾನ್ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ ಬಾಲ್ಯದಿಂದಲೂ ಕ್ರಿಕೆಟ್ ಕ್ಷೇತ್ರದಲ್ಲಿ ತಮ್ಮ ಪ್ರತಿಭೆ, ಸಾಮರ್ಥ್ಯವನ್ನು ಮೆರೆದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚಿ ಅಭೂತಪೂರ್ವ ಸಾಧನೆಗೈದ ಕ್ರಿಕೆಟಿಗರಾಗಿದ್ದಾರೆ. ಇದೀಗ ವಿನೋದ್ ಕಾಂಬ್ಳಿ ನನ್ ಜೀವದ ಗೆಳೆಯ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.
ಏತನ್ಮಧ್ಯೆ, ತನ್ನ ಕೆಟ್ಟ ಕಾಲದಲ್ಲಿ ಸಚಿನ್ ಸಹಾಯ ಮಾಡಲಿಲ್ಲ ಒಂದು ಟಿವಿ ಸಂದರ್ಶನದಲ್ಲಿ ಹೇಳಿದ ನಂತರ ಇಬ್ಬರ ನಡುವೆ ವೈಮನಸ್ಸು ಉಂಟಾಯಿತು. ಆದರೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಎಲ್ಲಾ ಅಸಮಾಧಾನಗಳನ್ನು ಬದಿಗಿಟ್ಟು ಕಾಂಬ್ಳಿ, ಅಜಿತ್ ಅಗರ್ಕರ್, ಅಮೋಲ್ ಮುಜುಮ್ದಾರ್ ಮತ್ತು ಇತರ ಸ್ನೇಹಿತರೊಂದಿಗೆ ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಇದಕ್ಕಿಂತ ಮೊದಲು, ವಿನೋದ್ ಕಾಂಬ್ಳಿ, ಸಚಿನ್ ಎ ಬಿಲಿಯನ್ ಡ್ರೀಮ್ಸ್ ಅತ್ಮಕಥನ ಬಿಡುಗಡೆಯ ನಂತರ ತಮ್ಮ ಜೀವದ ಗೆಳೆಯ ಸಚಿನ್‌ನೊಂದಿಗಿರುವ ಹಳೆಯ ಫೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡಿ ಡಿಯರ್ ಮಾಸ್ಟರ್ ಬ್ಲಾಸ್ಟರ್ ಐಲವ್ ಯೂ ಎಂದು ಕ್ಯಾಪ್ಶನ್ ಹಾಕಿದ್ದಾರೆ.