ಅವಕಾಶ ಸಿಗಬೇಕಿದ್ದರೆ ಕೊಹ್ಲಿ ಪತ್ನಿಯ ಫ್ರೆಂಡ್ ಶಿಪ್ ಮಾಡ್ಕೋ ಎಂದು ಸೌರಾಷ್ಟ್ರ ಕ್ರಿಕೆಟಿಗನಿಗೆ ಸಲಹೆ ನೀಡಿದ ನೆಟ್ಟಿಗ!

ಶುಕ್ರವಾರ, 13 ಸೆಪ್ಟಂಬರ್ 2019 (10:02 IST)
ಮುಂಬೈ: ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗದೇ ಇರುವ ಬಗ್ಗೆ ಟ್ವಿಟರ್ ನಲ್ಲಿ ಕಿಡಿ ಕಾರಿದ್ದ ಸೌರಾಷ್ಟ್ರ ಕ್ರಿಕೆಟಿಗ ಶೆಲ್ಟನ್ ಜಾಕ್ಸನ್ ಗೆ ನೆಟ್ಟಿಗನೊಬ್ಬ ಕೀಳು ಅಭಿರುಚಿಯ ಟ್ವೀಟ್ ಮಾಡಿದ್ದಾನೆ.


ಪ್ರತಿಭೆಯಿದ್ದೂ ಸೌರಾಷ್ಟ್ರ ಕ್ರಿಕೆಟಿಗರನ್ನು ಟೀಂ ಇಂಡಿಯಾಕ್ಕೆ ಪರಿಗಣಿಸುವುದಿಲ್ಲ ಯಾಕೆ ಎಂದು ಬಿಸಿಸಿಐ ನಡೆಯನ್ನು ಟ್ವಿಟರ್ ನಲ್ಲಿ ಪ್ರಶ್ನೆ ಮಾಡಿದ್ದರು. ಇದಕ್ಕೆ ಅಭಿಮಾನಿಯೊಬ್ಬ ನಿಮ್ಮ ಸಾಧನೆಯೇನು ಎಂದು ಪ್ರಶ್ನೆ ಮಾಡಿದ್ದ. ಅದಕ್ಕೆ ಸೌರಾಷ್ಟ್ರ ಕ್ರಿಕೆಟಿಗರ ಸಾಧನೆಯ ಪಟ್ಟಿಯನ್ನೇ ಶೆಲ್ಡನ್ ನೀಡಿದ್ದರು.

ಇದಕ್ಕೆ ಇನ್ನೊಬ್ಬ ವ್ಯಕ್ತಿ ನಿಮಗೆ ಅವಕಾಶ ಬೇಕಿದ್ದರೆ ಕೆಎಲ್ ರಾಹುಲ್ ರಂತೆ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಂಬಂಧ ಬೆಳೆಸಿ ಎಂದು ಕೀಳು ಅಭಿರುಚಿಯ ಟ್ವೀಟ್ ಮಾಡಿದ್ದ. ಇದಕ್ಕೆ ತಕ್ಕ ಎದಿರೇಟು ಕೊಟ್ಟಿರುವ ಶೆಲ್ಡನ್ ವಿವೇಚನೆಯಿಂದ ಕಾಮೆಂಟ್ ಮಾಡಿ. ರಾಹುಲ್ ಮತ್ತು ಅನುಷ್ಕಾ ಮಾಡಿದ ಅವಮಾನವಿದು. ಕುಟುಂಬದವರನ್ನು ದೂರವಿಡಿ ಎಂದು ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ