ಕ್ರಿಕೆಟಿಗ ವೃದ್ಧಿಮಾನ್ ಸಹಾಗೆ ಬೆದರಿಕೆ: ಭಜಿ, ಸೆಹ್ವಾಗ್ ಬೆಂಬಲ
ಟೀಂ ಇಂಡಿಯಾದಿಂದ ಕೈ ಬಿಟ್ಟಿದ್ದರ ಬಗ್ಗೆ ಪ್ರತಿಕ್ರಿಯೆ ಕೊಡಿ ಎಂದಾಗ ಸಹಾ ಪ್ರತಿಕ್ರಿಯಿಸಲಿಲ್ಲ ಎಂಬ ಕಾರಣಕ್ಕೆ ಪತ್ರಕರ್ತರೊಬ್ಬರು ವೃದ್ಧಿಮಾನ್ ಸಹಾಗೆ ಬೆದರಿಕೆ ಸಂದೇಶ ಕಳುಹಿಸಿದ್ದರಂತೆ. ನೀವು ನನ್ನ ಕರೆಗೆ ಉತ್ತರಿಸದೇ ಅವಮಾನ ಮಾಡಿದ್ದೀರಿ. ಇದಕ್ಕೆ ತಕ್ಕ ಫಲ ಅನುಭವಿಸಬೇಕಾಗುತ್ತದೆ ಎಂದು ಪತ್ರಕರ್ತರೊಬ್ಬರು ಸಂದೇಶ ಕಳುಹಿಸಿದ್ದನ್ನು ಸಹಾ ಸ್ಕ್ರೀನ್ ಶಾಟ್ ಸಮೇತ ಬಹಿರಂಗಪಡಿಸಿದ್ದಾರೆ.
ಈ ಬೆಳವಣಿಗೆ ಹಿನ್ನಲೆಯಲ್ಲಿ ಹರ್ಭಜನ್, ಸೆಹ್ವಾಗ್ ಟ್ವಿಟರ್ ಮೂಲಕ ಸಹಾಗೆ ಬೆಂಬಲ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಇಂತಹ ಪತ್ರಕರ್ತ ಯಾರು ಎಂಬುದನ್ನು ಬಹಿರಂಗಪಡಿಸಿ ಎಂದು ಭಜಿ ಆಗ್ರಹಿಸಿದರೆ, ಇಂತಹವರೆಲ್ಲಾ ಪತ್ರಕರ್ತರಲ್ಲ, ಚಮಚಾಗಳು ಎಂದು ಸೆಹ್ವಾಗ್ ಕಿಡಿ ಕಾರಿದ್ದಾರೆ.