42 ಎಸೆತಗಳಲ್ಲಿ ಶತಕ ಸಿಡಿಸಿದ ಶಾಹಿದ್ ಅಫ್ರಿದಿ

ಬುಧವಾರ, 23 ಆಗಸ್ಟ್ 2017 (15:55 IST)
1996ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 37 ಎಸೆತಗಳಲ್ಲಿ ಶತಕ ಸಿಡಿಸಿದ್ದ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ನಿವೃತ್ತಿ ಬಳಿಕವೂ ಅದೇ ಖದರ್ ಉಳಿಸಿಕೊಂಡಿದ್ದಾರೆ. ಕೌಂಟಿ ಪಂದ್ಯವೊಂದರಲ್ಲಿ ಅಫ್ರಿದಿ 42 ಎಸೆತಗಳಲ್ಲಿ 101 ರನ್ ಸಿಡಿಸಿದ್ದಾರೆ.
 

ಬ್ರಿಟನ್ನಿನ ಡರ್ಬಿಯಲ್ಲಿ ನಡೆದ ನಾಟ್ ವೆಸ್ಟ್ ಟಿ-20 ಟೂರ್ನಿಯ ಡರ್ಬಿ ಶೇರ್ ವಿರುದ್ಧದ ಪಂದ್ಯದಲ್ಲಿ ಹ್ಯಾಂಪ್ ಶೇರ್ ತಂಡದ ಆಟಗಾರ ಶಾಹೀದ್ ಅಫ್ರಿದಿ ಈ ಸಾಧನೆ ಮಾಡಿದ್ದಾರೆ. ಅಫ್ರಿದಿ ಶತಕದ ನೆರವಿನಿಂದ ತಂಡ 101 ರನ್`ಗಳ ಅಮೋಘ ಜಯ ದಾಖಲಿಸಿದೆ. 37 ವರ್ಷದ ಶಾಹಿದ್ ಅಫ್ರಿದಿಯವರ ಈ ಅಮೋಘ ಶತಕದಲ್ಲಿ 7 ಸಿಕ್ಸರ್ ಮತ್ತು 10 ಬೌಂಡರಿಗಳಿದ್ದವು.

ಮೊದಲು ಬ್ಯಾಟಿಂಗ್ ಮಾಡಿದ ಜೇಮ್ಸ್ ವಿಮ್ಸ್ ನೇತೃತ್ವದ ಹ್ಯಾಂಪ್ ಶೇರ್ ತಂಡ 20 ಓವರ್`ಗಳಲ್ಲಿ ಶಾಹಿದ್ ಅಫ್ರಿದಿ ಶತಕದ ನೆರವಿನಿಂದ 249 ರನ್`ಗಳ ಬೃಹತ್ ಮೊತ್ತ ಕಲೆಹಾಕಿದೆ. ಬೃಹತ್ ಮೊತ್ತ ಬೆನ್ನತ್ತಿದ ಡರ್ಬಿ ಶೇರ್ 148 ರನ್`ಗಳಿಗೆ ಆಲೌಟ್ ಆಗುವುದರೊಂದಿಗೆ ಹೀನಾಯ ನೋಲನುಭವಿಸಿದೆ.

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ