ಲಂಕಾ ಸರಣಿಗೆ ಧವನ್ ನಾಯಕ, ದೇವದತ್ತ್ ಪಡಿಕ್ಕಲ್ ಗೆ ಟೀಂ ಇಂಡಿಯಾ ಕರೆ

ಶುಕ್ರವಾರ, 11 ಜೂನ್ 2021 (09:16 IST)
ಮುಂಬೈ: ಶ್ರೀಲಂಕಾ ವಿರುದ್ಧ ನಡೆಯಲಿರುವ ಸೀಮಿತ ಓವರ್ ಗಳ ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾ ಪ್ರಕಟಿಸಲಾಗಿದ್ದು, ಶಿಖರ್ ಧವನ್ ಗೆ ನಾಯಕತ್ವ ನೀಡಲಾಗಿದೆ.

 

ಕನ್ನಡಿಗ ದೇವದತ್ತ್ ಪಡಿಕ್ಕಲ್ ಗೆ ಚೊಚ್ಚಲ ಟೀಂ ಇಂಡಿಯಾ ಕರೆ ನೀಡಲಾಗಿದೆ. ಹಿರಿಯರ ತಂಡ ಇಂಗ್ಲೆಂಡ್ ಪ್ರವಾಸದಲ್ಲಿರುವಾಗ ಇನ್ನೊಂದು ಟೀಂ ಇಂಡಿಯಾ ತಂಡವನ್ನು ಲಂಕಾ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಜುಲೈ 13 ರಿಂದ ಸರಣಿ ಆರಂಭವಾಗಲಿದ್ದು, ಏಕದಿನ ಮತ್ತು ಟಿ20 ಪಂದ್ಯಗಳು ನಡೆಯಲಿವೆ.

ತಂಡ ಇಂತಿದೆ: ಶಿಖರ್ ಧವನ್ (ನಾಯಕ), ಭುವನೇಶ್ವರ್ ಕುಮಾರ್, ಪೃಥ್ವಿ ಶಾ, ದೇವದತ್ತ್ ಪಡಿಕ್ಕಲ್, ಋತುರಾಜ್ ಗಾಯಕ್ ವಾಡ್, ಸೂರ್ಯಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಯಜುವೇಂದ್ರ ಚಾಹಲ್, ರಾಹುಲ್ ಚಹರ್, ಕೃಷ್ಣಪ್ಪ ಗೌತಮ್, ಕೃನಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಹರ್, ನವದೀಪ್ ಸೈನಿ, ಚೇತನ್ ಸಕಾರಿಯಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ