ವಿಂಡೀಸ್ ಸರಣಿಯಿಂದ ಶುಬ್ಮನ್ ಗಿಲ್ ಔಟ್?!
ಶುಬ್ಮನ್ ಗಿಲ್ ಟೆಸ್ಟ್, ಏಕದಿನ ಸರಣಿಯಲ್ಲಿ ಆಡಲಿದ್ದಾರೆ. ಬಳಿಕ ಟಿ20 ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡುವ ಸಾಧ‍್ಯತೆಯಿದೆ. ಅವರ ಸ್ಥಾನಕ್ಕೆ ಋತುರಾಜ್ ಗಾಯಕ್ ವಾಡ್ ಆಯ್ಕೆಯಾಗುವ ಸಾಧ‍್ಯತೆ ಬಹುತೇಕ ನಿಶ್ಚಿತವಾಗಿದೆ.
ಮುಂಬರುವ ಏಕದಿನ ವಿಶ್ವಕಪ್ ದೃಷ್ಟಿಯಲ್ಲಿಟ್ಟುಕೊಂಡು ಗಿಲ್ ಗೆ ತೊಂದರೆಯಾಗದಂತೆ ಕಾಪಾಡಿಕೊಳ್ಳುವ ಸಾಧ‍್ಯತೆಯಿದೆ. ಇದೇ ರೀತಿ ಪ್ರಮುಖ ಆಟಗಾರರಿಗೆ ನಡುವೆ ಕೆಲವು ಪಂದ್ಯಗಳಲ್ಲಿ ವಿಶ್ರಾಂತಿ ಸಿಗುವ ಸಾಧ‍್ಯತೆಯಿದೆ.