ಸ್ಪಿನ್ ಬೌಲಿಂಗ್ ನಿಗೂಢತೆ ಬಯಲು: ಆಸ್ಟ್ರೇಲಿಯಾ ವಿಜ್ಞಾನಿಗಳು

ಮಂಗಳವಾರ, 26 ಜುಲೈ 2016 (18:15 IST)
ಕ್ರಿಕೆಟ್‌ನಲ್ಲಿ ಸ್ಪಿನ್ ಬೌಲಿಂಗ್ ರಹಸ್ಯಗಳನ್ನು ಕುರಿತು ಬೆಳಕು ಚೆಲ್ಲಲು ಆಸ್ಟ್ರೇಲಿಯಾ ವಿಜ್ಞಾನಿಗಳು ಗಣಿತವನ್ನು ಬಳಸಿದ್ದಾರೆ. ಇದು ಬ್ಯಾಟ್ಸ್‌ಮನ್‌ಗಳನ್ನು ಗೊಂದಲಕ್ಕೀಡುಮಾಡಲು ಬೇಕಾದ ವಿವಿಧ ಎಸೆತಗಳಲ್ಲಿ ಪ್ರಭುತ್ವ ಸಾಧಿಸಲು ಹೊಸಬರಿಗೆ ನೆರವಾಗುತ್ತದೆ.
 
 ಸ್ಲೋ ಬೌಲರುಗಳು ಬಳಸುವ ಚೆಂಡಿನ ಆವರ್ತದಲ್ಲಿ ಸಣ್ಣ ವ್ಯತ್ಯಾಸಗಳಿಂದ ಕೂಡಿದ ಎಸೆತಗಳು ನೆಲದ ಮೇಲೆ ಪಿಚ್ ಆಗುವುದಕ್ಕೆ ಮುಂಚಿತವಾಗಿ ಬ್ಯಾಟ್ಸ್‌ಮನ್‌ಗಳಿಗೆ ದೊಡ್ಡ ಸಮಸ್ಯೆಯನ್ನು ಉಂಟುಮಾಡುತ್ತದೆಂದು ಲೆಕ್ಕಾಚಾರಗಳು ತೋರಿಸಿವೆ. ಸ್ಪಿನ್ ಬೌಲರುಗಳು ಬ್ಯಾಟ್ಸ್‌ಮನ್‌ಗಳಿಗೆ ಗೊಂದಲ ಉಂಟುಮಾಡಲು ಚೆಂಡು ನಿಧಾನವಾಗಿ ಗಾಳಿಯಲ್ಲಿ ತೇಲುವಂತೆ ಮಾಡುವುದರಲ್ಲಿ ಪ್ರಭುತ್ವ ಸಾಧಿಸಿರುತ್ತಾರೆ. 
 
 
ಆಟದ ಲೆಜೆಂಡ್‌ಗಳು ಎದುರಾಳಿಯನ್ನು ಮೂರ್ಖರನ್ನಾಗಿಸಲು ಟಾಪ್ ಸ್ಪಿನ್, ಸೈಡ್ ಸ್ಪಿನ್ ಮತ್ತು ಆಫ್ ಸ್ಪಿನ್ ಮುಂತಾದ ಮಾಂತ್ರಿಕ ಸಂಯೋಜನೆಗಳನ್ನು ತಿಳಿದಿರುತ್ತಾರೆ ಎಂದು ಸಂಶೋಧಕರು ಹೇಳಿದ್ದಾರೆ. 
 
ಹೊಸಬರಿಗೆ ತಮ್ಮ ವಿಶ್ಲೇಷಣೆಯು ವಿವಿಧ ಸ್ಪಿನ್ ಎಸೆತಗಳಲ್ಲಿ ಪ್ರಭುತ್ವ ಸಾಧಿಸಿ ಬ್ಯಾಟ್ಸ್‌ಮನ್‌ನನ್ನು ಗೊಂದಲಕ್ಕೆ ದೂಡಲು ಸಹಾಯಹಸ್ತ ನೀಡುತ್ತದೆ. ಟೆನ್ನಿಸ್ ಆಟಗಾರರು ಕೂಡ ಇದರ ಅನುಕೂಲ ಪಡೆಯಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 
 

ವೆಬ್ದುನಿಯಾವನ್ನು ಓದಿ