ಕೊಹ್ಲಿ ಅವತಾರ ನೋಡಿ ಥರ ಥರ ನಡುಗಿತು ತರಂಗಾ ಪಡೆ

ಸೋಮವಾರ, 4 ಸೆಪ್ಟಂಬರ್ 2017 (08:49 IST)
ಕೊಲೊಂಬೊ: ಶ್ರೀಲಂಕಾ ವಿರುದ್ಧ ಐದನೇ ಪಂದ್ಯವನ್ನೂ ಆರು ವಿಕೆಟ್ ಗಳಿಂದ ಟೀಂ ಇಂಡಿಯಾ ತನ್ನ ತೆಕ್ಕೆಗೆ ಎಳೆದುಕೊಂಡಿದೆ. ಇದರೊಂದಿಗೆ ಐದು ಪಂದ್ಯಗಳ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. 


ಮತ್ತೆ ಚೇಸಿಂಗ್ ವೀರ ಎಂದು ಸಾಬೀತು ಪಡಿಸಿದ ನಾಯಕ ಕೊಹ್ಲಿ ಮತ್ತೊಂದು ಶತಕ ದಾಖಲಿಸಿದರು. 30 ನೇ ಏಕದಿನ ಶತಕ ದಾಖಲಿಸಿದ ಅವರು ಏಕದಿನ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕ ದಾಖಲಿಸಿದವರ ಪೈಕಿ ದ್ವಿತೀಯ ಸ್ಥಾನದಲ್ಲಿದ್ದ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದರು.

ಅಷ್ಟೇ ಅಲ್ಲದೆ, ಈ ವರ್ಷ ಏಕದಿನ ಕ್ರಿಕೆಟ್ ನಲ್ಲಿ 1000 ರನ್ ಪೂರೈಸಿದ ಪ್ರಥಮ ಬ್ಯಾಟ್ಸ್ ಮನ್ ಎನಿಸಿದರು. ಮನೀಶ್ ಪಾಂಡೆ ಜತೆ 99 ರನ್ ಗಳ ಜತೆಯಾಟ ನಿಭಾಯಿಸಿದ ಅವರು 110 ರನ್ ಗಳಿಸಿ ಅಜೇಯರಾಗುಳಿದರು. ಇದರೊಂದಿಗೆ ಕೊಹ್ಲಿ ಅತೀ ಹೆಚ್ಚು ಶತಕಗಳನ್ನು ಲಂಕಾ ವಿರುದ್ಧವೇ ಗಳಿಸಿದಂತಾಗಿದೆ. ಮನೀಶ್ ಕೊಡುಗೆ 36 ರನ್.

ಇನ್ನೊಂದೆಡೆ ಭಾರತದ ವೇಗಿ ಭುವನೇಶ್ವರ ಕುಮಾರ್ ತಮ್ಮ ವೃತ್ತಿ ಜೀವನದ ಮೊದಲ 5 ವಿಕೆಟ್ ಗಳ ಗೊಂಚಲು ಪಡೆದರು. ಲಂಕಾ ಬ್ಯಾಟ್ಸ್ ಮನ್ ಮಲಿಂಗಾ ಬದಲಿ ಕ್ಷೇತ್ರರಕ್ಷಕ ಕೆಎಲ್ ರಾಹುಲ್ ಕೈಗೆ ಕ್ಯಾಚ್ ಇತ್ತು ನಿರ್ಗಮಿಸುವುದರೊಂದಿಗೆ ಭುವಿಗೆ 5 ವಿಕೆಟ್ ಗಳ ದಾಖಲೆಯಾಯ್ತು.

ಇನ್ನು, ವಿಕೆಟ್ ಕೀಪರ್ ಧೋನಿ ವಿಶಿಷ್ಟ ಶತಕ ದಾಖಲಿಸಿದರು. ಅವರು ಈ ಪಂದ್ಯದಲ್ಲಿ 100 ನೇ ಸ್ಟಂಪ್ ಔಟ್ ಮಾಡುವ ಮೂಲಕ  ಅತೀ ಹೆಚ್ಚು ಸ್ಟಂಪ್ ಔಟ್ ಮಾಡಿದ ವಿಕೆಟ್ ಕೀಪರ್ ಎಂಬ ಗೌರವಕ್ಕೆ ಪಾತ್ರರಾದರು.

ಇದನ್ನೂ ಓದಿ.. ಮತ್ತೆ ಮೋಡಿ ಮಾಡಿತು ಗಣಿ-ಭಟ್ಟರ ಜೋಡಿ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ