2011 ರ ವಿಶ್ವಕಪ್ ಮ್ಯಾಚ್ ಫಿಕ್ಸಿಂಗ್ ಆರೋಪ ತನಿಖೆ ಅರ್ಧಕ್ಕೇ ಕೈ ಬಿಟ್ಟ ಲಂಕಾ
ಈ ಹಿನ್ನಲೆಯಲ್ಲಿ ಆ ಪಂದ್ಯದ ನಾಯಕರಾಗಿದ್ದ ಕುಮಾರ ಸಂಗಕ್ಕಾರ ಸೇರಿದಂತೆ ಲಂಕಾ ತಂಡದ ಪ್ರಮುಖರನ್ನು ವಿಚಾರಣಗೊಳಪಡಿಸಲಾಗಿತ್ತು. ಆದರೆ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರ ಸಿಗದ ಹಿನ್ನಲೆಯಲ್ಲಿ ತನಿಖೆ ನಿಲ್ಲಿಸಲು ತನಿಖಾ ತಂಡ ತೀರ್ಮಾನಿಸಿದೆ. ಆವತ್ತು ತಂಡದಲ್ಲಿ ನಡೆಸಿದ ಆಟಗಾರರ ಬದಲಾವಣೆ, ನಿರ್ಧಾರಗಳಿಗೆ ನಾಯಕ ಸೇರಿದಂತೆ ಪ್ರಮುಖರು ಸೂಕ್ತ ಕಾರಣ ನೀಡಿದ್ದಾರೆ. ಹೀಗಾಗಿ ನಾವು ಅವರ ಉತ್ತರದಿಂದ ತೃಪ್ತರಾಗಿದ್ದು, ಈ ಕುರಿತು ಹೆಚ್ಚಿನ ತನಿಖೆಯ ಅಗತ್ಯವಿಲ್ಲ ಎಂದು ತನಿಖಾ ತಂಡ ನಿರ್ಧಾರಕ್ಕೆ ಬಂದಿದೆ.