ಮುಂಬೈ: ಟಿ20 ವಿಶ್ವಕಪ್ ಸೂಪರ್ 8 ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಸೋತ ಟೀಂ ಇಂಡಿಯಾಗೆ ಈಗ ಸೆಮಿಫೈನಲ್ ಹಾದಿ ಕಠಿಣವಾಗಿದೆ. ಸೆಮಿಫೈನಲ್ ಗೆ ತಲುಪಲು ಏನು ಮಾಡಬೇಕು ಇಲ್ಲಿದೆ ಲೆಕ್ಕಾಚಾರ.
ಟಿ20 ವಿಶ್ವಕಪ್ ನಲ್ಲಿ ಸೂಪರ್ 8 ಹಂತದಲ್ಲಿ ಮೂರು ಪಂದ್ಯಗಳಿವೆ. ಆ ಪೈಕಿ ದಕ್ಷಿಣ ಆಫ್ರಿಕಾ ವಿರುದ್ಧ ನಿನ್ನೆಯ ಪಂದ್ಯವನ್ನು ಟೀಂ ಇಂಡಿಯಾ 76 ರನ್ ಗಳಿಂದ ಸೋತಿದೆ. ಇದರೊಂದಿಗೆ ದಕ್ಷಿಣ ಆಫ್ರಿಕಾ 2 ಅಂಕಗಳೊಂದಿಗೆ +3.800 ರನ್ ರೇಟ್ ಪಡೆದಿದ್ದು ಅಗ್ರ ಸ್ಥಾನದಲ್ಲಿದೆ.
ಇತ್ತ ಟೀಂ ಇಂಡಿಯಾ ಸೋತಿರುವುದರಿಂದ ರನ್ ರೇಟ್ -3.800 ಪಡೆದುಕೊಂಡಿದೆ. ಇದೀಗ ಭಾರತಕ್ಕೆ ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸೂಪರ್ 8 ಹಂತದ ಪಂದ್ಯಗಳಿವೆ. ಈ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ 4 ಅಂಕ ಸಿಗಲಿದೆ.
ಆದರೆ ಸೆಮಿಫೈನಲ್ ಗೇರಬೇಕಾದರೆ ಈ ಎರಡೂ ತಂಡಗಳ ವಿರುದ್ಧ ಉತ್ತಮ ರನ್ ರೇಟ್ ಕೂಡಾ ಪಡೆಯುವ ಅನಿವಾರ್ಯವಾಗಿದೆ. ದಕ್ಷಿಣ ಆಫ್ರಿಕಾ ಒಂದು ಪಂದ್ಯದಲ್ಲಿ ಸೋತರೂ ಟೀಂ ಇಂಡಿಯಾಗೆ ಪ್ಲಸ್ ಪಾಯಿಂಟ್ ಆಗಲಿದೆ.