ಟಿ20 ವಿಶ್ವಕಪ್:ಪಾಕಿಸ್ತಾನದ ಸೆಮಿಫೈನಲ್ ಹಾದಿ ಬಹುತೇಕ ಬಂದ್

ಶುಕ್ರವಾರ, 28 ಅಕ್ಟೋಬರ್ 2022 (10:29 IST)
ಮೆಲ್ಬೋರ್ನ್: ಟಿ20 ವಿಶ್ವಕಪ್ ನಲ್ಲಿ ಎರಡೂ ಪಂದ್ಯ ಸೋತಿರುವ ಪಾಕಿಸ್ತಾನದ ಮುಂದಿನ ಹಾದಿ ಬಹುತೇಕ ಬಂದ್ ಆಗಿದೆ.

ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಪಾಕ್ ಕೊನೆಯ ಬಾಲ್ ನಲ್ಲಿ ಸೋತಿತ್ತು. ಅದಾದ ಬಳಿಕ ನಿನ್ನೆ ನಡೆದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 1 ರನ್ ಗಳಿಂದ ಸೋಲಿನ ಆಘಾತ ಎದುರಿಸಿದೆ. ಇದೀಗ ಎರಡೂ ಪಂದ್ಯ ಸೋತಿರುವ ಪಾಕ್ ಗೆ ಮುಂದಿನ ಹಾದಿ ದುರ್ಗಮವಾಗಿದೆ.

ಇದೀಗ ಪಾಕ್ ಮುಂದಿನ ಎಲ್ಲಾ ಪಂದ್ಯಗಳನ್ನು ಭಾರೀ ಅಂತರದಿಂದ ಗೆದ್ದು, ಟೀಂ ಇಂಡಿಯಾ ಅಥವಾ ದ.ಆಫ್ರಿಕಾ ಮುಂದಿನ ಪಂದ್ಯಗಳಲ್ಲಿ ಸೋತರೆ ಮಾತ್ರ ಪಾಕ್ ಗೆ ಸೆಮಿಫೈನಲ್ ಹಾದಿ ಸುಗಮವಾಗಲಿದೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ