T20 World Cup 2024: ವಿರಾಟ್ ಕೊಹ್ಲಿ ಔಟಾದಾಗ ಅನುಷ್ಕಾ ಶರ್ಮಾ ಮಾಡಿದ್ದೇನು

Krishnaveni K

ಸೋಮವಾರ, 10 ಜೂನ್ 2024 (09:27 IST)
Photo Credit: X
ನ್ಯೂಯಾರ್ಕ್: ಪಾಕಿಸ್ತಾನ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ವಿರಾಟ್ ಕೊಹ್ಲಿ ಔಟಾದಾಗ ಗ್ಯಾಲರಿಯಲ್ಲಿದ್ದ ಪತ್ನಿ ಅನುಷ್ಕಾ ಶರ್ಮಾ ಪ್ರತಿಕ್ರಿಯೆ ಈಗ ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಕಳೆದ ಎರಡೂ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಮೊದಲ ಪಂದ್ಯದಲ್ಲಿ 1 ರನ್ ಗೆ ವಿಕೆಟ್ ಒಪ್ಪಿಸಿದ ಅವರು ನಿನ್ನೆಯೂ ಮತ್ತೊಮ್ಮೆ ವಿಫಲರಾದರು. ನಿನ್ನೆಯ ಪಂದ್ಯದಲ್ಲಿ ಅವರು 4 ರನ್ ಗಳಿಸಿ ನಸೀಂ ಶಾ ಎಸೆತದಲ್ಲಿ ಉಸ್ಮಾನ್ ಖಾನ್ ಗೆ ಕ್ಯಾಚಿತ್ತು ನಿರ್ಗಮಿಸಿದರು.

ಔಟಾದ ನಿರಾಸೆಯಲ್ಲಿ ಅವರು ಪೆವಿಲಿಯನ್ ಗೆ ಹೆಜ್ಜೆ ಹಾಕುತ್ತಿರುವಾಗಿ ಗ್ಯಾಲರಿಯಲ್ಲಿ ಕೂತಿದ್ದ ಅನುಷ್ಕಾ ಶರ್ಮಾ ರಿಯಾಕ್ಷನ್ ಎಲ್ಲರ ಗಮನ ಸೆಳೆದಿದೆ. ವಿರಾಟ್ ಕೊಹ್ಲಿ ಔಟಾದಾಗ ಅನುಷ್ಕಾ ಶರ್ಮಾ ಕಣ್ಣು ಮುಚ್ಚಿಕೊಂಡು ತೀರಾ ನಿರಾಸೆಯ ಭಾವ ಹೊರಹಾಕಿದ್ದಾರೆ.

ಕೊಹ್ಲಿಯನ್ನು ಚಿಯರ್ ಅಪ್ ಮಾಡಲೆಂದೇ ತಮ್ಮಿಬ್ಬರು ಮಕ್ಕಳನ್ನು ಕರೆದುಕೊಂಡು ನ್ಯೂಯಾರ್ಕ್ ಗೆ ತೆರಳಿರುವ ಅನುಷ್ಕಾ ಪತಿ ಔಟಾಗುತ್ತಿದ್ದಂತೇ ತೀರಾ ನಿರಾಸೆಗೊಳಗಾಗಿದ್ದಾರೆ. ಈ ಹೊಡೆತವನ್ನು ಕೊಹ್ಲಿ ಹೊಡೆಯಬಾರದಿತ್ತು ಎನ್ನುವ ಮುಖಭಾವ ಮಾಡಿ ಕೂತಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ