ಇಂಗ್ಲೆಂಡ್ ಏಕದಿನ, ಟಿ- ಟ್ವೆಂಟಿ ಸರಣಿಗೆ ತಂಡ ಪ್ರಕಟ, ಯುವರಾಜ್ ಸಿಂಗ್ ವಾಪಸ್, ವಿರಾಟ್ ಕೊಹ್ಲಿ ನಾಯಕತ್ವ

ಶುಕ್ರವಾರ, 6 ಜನವರಿ 2017 (16:31 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಏಕದಿನ ಸರಣಿಗೆ ತಂಡ ಪ್ರಕಟವಾಗಿದ್ದು, ನಿರೀಕ್ಷೆಯಂತೇ ವಿರಾಟ್ ಕೊಹ್ಲಿ ಏಕದಿನ ಪಂದ್ಯಗಳಿಗೂ ನಾಯಕರಾಗಿ ಆಯ್ಕೆಯಾಗಿದ್ದಾರೆ. ಮಾಜಿ ನಾಯಕ ಎಂಎಸ್ ಧೋನಿ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಆಗಿ ತಂಡದಲ್ಲಿದ್ದಾರೆ.


ವಿಶೇಷವೆಂದರೆ ಮುಂಬೈಯಲ್ಲಿ ಸಭೆ ಸೇರಿದ ಆಯ್ಕೆ ಸಮಿತಿ ಟೀಂ ಇಂಡಿಯಾ ಪ್ರಕಟಿಸಿದ್ದು, ಧೋನಿಯಿಂದ ತೆರವಾದ ನಾಯಕ ಸ್ಥಾನಕ್ಕೆ ಟೆಸ್ಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿಯನ್ನು ಆರಿಸಿದ್ದಾರೆ. ಇದರೊಂದಿಗೆ ಕೊಹ್ಲಿ ಟೀಂ ಇಂಡಿಯಾ ಪೂರ್ಣ ಪ್ರಮಾಣದ ನಾಯಕರಾದಂತಾಗಿದೆ. ಬಹುದಿನಗಳ ನಂತರ ಯುವರಾಜ್ ಸಿಂಗ್ ಮತ್ತು ಆಶಿಷ್ ನೆಹ್ರಾ ತಂಡಕ್ಕೆ ವಾಪಸಗಿದ್ದಾರೆ.

ಇನ್ನೊಂದೆಡೆ ಕೇವಲ ಆಟಗಾರನಾಗಿ ಸೀಮಿತ ಓವರ್ ಗಳ ಪಂದ್ಯದಲ್ಲಿ ಮುಂದುವರಿಯಲು ಬಯಸಿದ ಧೋನಿಗೆ ವಿಕೆಟ್ ಕೀಪರ್ ಆಗಿ ಸ್ಥಾನ ಸಿಕ್ಕಿದೆ. ಇವರ ಹೊರತಾಗಿ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾರಿಗೆ ಮೊದಲೇ ಹೇಳಿದಂತೆ ವಿಶ್ರಾಂತಿ ನೀಡಲಾಗಿಲ್ಲ. ಹಿರಿಯ ಆಟಗಾರ ಆಶಿಷ್ ನೆಹ್ರಾ ಸ್ಥಾನ ಪಡೆದರೆ, ಇಶಾಂತ್ ಶರ್ಮಾ ಸ್ಥಾನ ಪಡೆಯಲು ವಿಫಲರಾದರು.

ಕನ್ನಡಿಗ ಕೆಎಲ್ ರಾಹುಲ್ ಏಕದಿನ ಮತ್ತು ಟಿ ಟ್ವೆಂಟಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಸುರೇಶ್ ರೈನಾ ಟಿ-ಟ್ವೆಂಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಚುಟುಕು ಕ್ರಿಕೆಟ್ ನಲ್ಲಿ ಸ್ಥಾನ ಪಡೆದ ಹೊಸ ಆಟಗಾರ ಯಜುವೇಂದ್ರ ಚಾಹಲ್.

ಏಕದಿನ ತಂಡ: ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್, ಮನ್ ದೀಪ್ ಸಿಂಗ್,  ಯುವರಾಜ್ ಸಿಂಗ್,  ಆಶಿಷ್ ನೆಹ್ರಾ, ಕೆ ಎಲ್ ರಾಹುಲ್,  ಎಂಎಸ್ ಧೋನಿ,  ಮನೀಶ್ ಪಾಂಡೆ, ಕೇದಾರ್ ಜಾದವ್,  ಅಜಿಂಕ್ಯಾ ರೆಹಾನೆ, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್,  ರವೀಂದ್ರ ಜಡೇಜಾ, ಅಮಿತ್ ಮಿಶ್ರಾ, ಜಸ್ಪ್ರೀತ್ ಬುಮ್ರಾ,  ಭುವನೇಶ್ವರ ಕುಮಾರ್, ಉಮೇಶ್ ಯಾದವ್.

 
ಟಿ-ಟ್ವೆಂಟಿ ತಂಡ: ವಿರಾಟ್ ಕೊಹ್ಲಿ, ಕೆಎಲ್ ರಾಹುಲ್,  ಎಂಎಸ್ ಧೋನಿ,  ಯುವರಾಜ್ ಸಿಂಗ್,  ಸುರೇಶ್ ರೈನಾ, ರಿಷಬ್ ಪಂತ್, ಮನ್ ದೀಪ್ ಸಿಂಗ್,  ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್,  ರವೀಂದ್ರ ಜಡೇಜಾ, ಯಜುವೇಂದ್ರ ಚಾಹಲ್, ಮನೀಶ್ ಪಾಂಡೆ,  ಜಸ್ಪ್ರೀತ್ ಬುಮ್ರಾ, ಭುವನೇಶ್ವರ ಕುಮಾರ್, ಆಶಿಷ್ ನೆಹ್ರಾ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ