ಜೊಹಾನ್ಸ್ ಬರ್ಗ್ ತಲುಪಿದ ಟೀಂ ಇಂಡಿಯಾ ಕ್ರಿಕೆಟಿಗರು
ಬುಧವಾರ ರಾತ್ರಿ ಭಾರತದಿಂದ ಪ್ರಯಾಣ ಬೆಳೆಸಿದ್ದ ಕ್ರಿಕೆಟಿಗರು ನಿನ್ನೆ ಜೊಹಾನ್ಸ್ ಬರ್ಗ್ ಗೆ ತಲುಪಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಇಡೀ ತಂಡ ಕಾಮನ ಬಿಲ್ಲಿನ ನಾಡಿಗೆ ಬಂದಿಳಿದಿದೆ.
ಒಂದು ದಿನ ಕ್ವಾರಂಟೈನ್ ಗೊಳಗಾಗಲಿರುವ ಕ್ರಿಕೆಟಿಗರು ಬಳಿಕ ಅಭ್ಯಾಸಕ್ಕಿಳಿಯಲಿದ್ದಾರೆ. ಕ್ರಿಕೆಟಿಗರ ಸುರಕ್ಷತೆ ದೃಷ್ಟಿಯಿಂದ ರೆಸಾರ್ಟ್ ಒಂದರಲ್ಲಿ ಬಯೋ ಬಬಲ್ ವಾತಾವರಣ ಸೃಷ್ಟಿಸಲಾಗಿದೆ. ಡಿಸೆಂಬರ್ 26 ರಿಂದ ಸರಣಿ ಆರಂಭವಾಗಲಿದೆ.