ನಾಯಕ-ಉಪನಾಯಕನ ಜತೆಯಾಟ: ಬೃಹತ್ ಮುನ್ನಡೆಯತ್ತ ಟೀಂ ಇಂಡಿಯಾ

ಭಾನುವಾರ, 25 ಆಗಸ್ಟ್ 2019 (09:27 IST)
ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನಾಟದ ಅಂತ್ಯಕ್ಕೆ ಟೀಂ ಇಂಡಿಯಾ ದ್ವಿತೀಯ ಇನಿಂಗ್ಸ್ ನಲ್ಲಿ 3 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿತು.


ಇದರೊಂದಿಗೆ ಟೀಂ ಇಂಡಿಯಾ 260 ರನ್ ಗಳ ಬೃಹತ್ ಮುನ್ನಡೆ ಪಡೆದಿದೆ. ದಿನದಂತ್ಯಕ್ಕೆ ನಾಯಕ ಕೊಹ್ಲಿ 51 ಮತ್ತು ಉಪನಾಯಕ  ಅಜಿಂಕ್ಯಾ ರೆಹಾನೆ 53 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ಆರಂಭಿಕ ಕೆಎಲ್ ರಾಹುಲ್ 38 ಮತ್ತು ಮಯಾಂಕ್ ಅಗರ್ವಾಲ್ 16 ರನ್ ಗಳಿಗೆ ವಿಕೆಟ್ ಒಪ್ಪಿಸಿದರೆ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರ ಇನಿಂಗ್ಸ್ ಕೇವಲ 25 ರನ್ ಗಳಿಗೆ ಕೊನೆಯಾಗಿತ್ತು. ವಿಂಡೀಸ್ ಪರ ರೋಸ್ಟನ್ ಚೇಸ್ 2 ಮತ್ತು ಕೆಮರ್ ರೋಚ್ 1 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ