ವೇಗಿಗಳ ಕರಾಮತ್ತು: ಟೀಂ ಇಂಡಿಯಾದಿಂದ ಹ್ಯಾಟ್ರಿಕ್ ದಾಖಲೆ

ಗುರುವಾರ, 14 ನವೆಂಬರ್ 2019 (17:02 IST)
ಇಂಧೋರ್: ಭಾರತ ಮತ್ತು ಬಾಂಗ್ಲಾದೇಶ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ನ ಮೊದಲ ದಿನ ಬಾಂಗ್ಲಾ ತಂಡವನ್ನು 150 ರನ್ ಗಳಿಗೆ ಆಲೌಟ್ ಮಾಡಿದ ಟೀಂ ಇಂಡಿಯಾ ಹೊಸ ದಾಖಲೆ ಮಾಡಿದೆ.


ಈ ಪಂದ್ಯದಲ್ಲಿ ಟೀಂ ಇಂಡಿಯಾ ವೇಗಿಗಳಾದ ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಶಮಿ ಸೇರಿಕೊಂಡು ತಂಡಕ್ಕೆ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದ್ದಾರೆ. ಎರಡನೇ ಅವಧಿಯ ಕೊನೆಯಲ್ಲಿ ಶಮಿ ಎರಡು ಸತತ ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸಿದರು.

ಇದಾದ ಬಳಿಕ ಮೂರನೇ ಅವಧಿಯ ಆಟ ಆರಂಭವಾದ ಮೊದಲ ಎಸೆತದಲ್ಲೇ ಇಶಾಂತ್ ಶರ್ಮಾ ಮತ್ತೊಂದು ವಿಕೆಟ್ ಕಬಳಿಸಿದರು. ಈ ಮೂಲಕ ಇದು ಟೀಂ ಹ್ಯಾಟ್ರಿಕ್ ಆಗಿ ದಾಖಲಾಯಿತು. ಈ ರೀತಿ ಈ ವರ್ಷ ಟೀಂ ಇಂಡಿಯಾ ಇದು ನಾಲ್ಕನೇ ಬಾರಿಗೆ ಟೀಂ ಹ್ಯಾಟ್ರಿಕ್ ಮಾಡುವ ಮೂಲಕ ದಾಖಲೆ ಮಾಡಿದೆ.

2019 ರ ವಿಶ್ವಕಪ್ ನಲ್ಲಿ ಮೊದಲ ಬಾರಿಗೆ, ಅದಾದ ಬಳಿಕ ನಡೆದ ವೆಸ್ಟ್ ಇಂಡೀಸ್ ಸರಣಿಯಲ್ಲಿ ಎರಡನೇ ಬಾರಿಗೆ ಮತ್ತು ಕಳೆದ ವಾರ ನಡೆದ ಟಿ20 ಸರಣಿಯಲ್ಲಿ ದೀಪಕ್ ಚಹರ್ ಹ್ಯಾಟ್ರಿಕ್ ಗಳಿಸಿದ್ದರು.  ಇದಾದ ಬಳಿಕ ಇಂದು ಮತ್ತೆ ಆ ದಾಖಲೆ ನಿರ್ಮಾಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ