ಸಿಡಿದ ಅಕ್ಸರ್ ಪಟೇಲ್: ಟೀಂ ಇಂಡಿಯಾಕ್ಕೆ ಮತ್ತೆ ಫೈನಲ್ ಓವರ್ ಗೆಲುವು

ಸೋಮವಾರ, 25 ಜುಲೈ 2022 (07:27 IST)
ಟ್ರಿನಿಡಾಡ್: ಮತ್ತೊಂದು ಹೈ ಸ್ಕೋರ್ ಪಂದ್ಯ, ಮತ್ತೆ ಫೈನಲ್ ಓವರ್ ರೋಚಕ ಕದನ. ಕೊನೆಗೆ ಭಾರತಕ್ಕೆ 2 ವಿಕೆಟ್ ಗಳ ರೋಚಕ ಗೆಲುವು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಏಕದಿನ ಪಂದ್ಯವೂ ರೋಚಕವಾಗಿ ಕೊನೆಗೊಂಡಿದೆ.
 

ಮೊದಲ ಪಂದ್ಯದಲ್ಲಿ ಫೈನಲ್ ಓವರ್ ನಲ್ಲಿ 3 ರನ್ ಗಳಿಂದ ಗೆದ್ದಿದ್ದ ಟೀಂ ಇಂಡಿಯಾ ಈ ಬಾರಿಯೂ ಫೈನಲ್ ಓವರ್ ನಲ್ಲಿ 2 ಎಸೆತ ಬಾಕಿಯಿರುವಾಗ 2 ವಿಕೆಟ್ ಗೆಲುವು ಕಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 50 ಓವರ್ ಗಳಲ್ಲಿ 6 ವಿಕೆಟ್‍ ನಷ್ಟಕ್ಕೆ 311 ರನ್ ಗಳಿಸಿತು. ಶೈ ಹೋಪ್ ತಮ್ಮ 100 ನೇ ಏಕದಿನ ಪಂದ್ಯದಲ್ಲಿ 115 ರನ್ ಸಿಡಿಸಿ ದಾಖಲೆ ಮಾಡಿದರು. ನಾಯಕ ನಿಕಲಸ್ ಪೂರನ್ 75 ರನ್ ಗಳ ಕೊಡುಗೆ ನೀಡಿದರು. ಭಾರತದ ಪರ ಶ್ರಾದ್ಧೂಲ್ 3 ವಿಕೆಟ್, ದೀಪಕ್ ಹೂಡಾ, ಚಾಹಲ್, ಅಕ್ಸರ್ ಪಟೇಲ್ ತಲಾ 1 ವಿಕೆಟ್ ಕಿತ್ತರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಶಿಖರ್ ಧವನ್ (13) ರನ್ನು ಬೇಗನೇ ಕಳೆದುಕೊಂಡಿತು.  ಶುಬ್ನಂ ಗಿಲ್ 43 ರನ್ ಗಳ ಕೊಡುಗೆ ನೀಡಿದರು. ಅವರಿಗೆ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 63 ರನ್ ಗಳಿಸಿದರು. ಆದರೆ ತಂಡಕ್ಕೆ ಗೆಲುವಿನ ಭರವಸೆ ಚಿಗುರಿಸಿದ್ದು ಸಂಜು ಸ್ಯಾಮ್ಸನ್ ರ ಬಿರುಸಿನ 54 ರನ್. ಹಾಗಿದ್ದರೂ ಅಕ್ಸರ್ ಪಟೇಲ್ ಸಿಡಿಯದೇ ಹೋಗಿದ್ದರೆ ತಂಡ ಸೋಲಬೇಕಾಗಿತ್ತು. ಆದರೆ ಕೊನೆಯಲ್ಲಿ ಕೇವಲ 35 ಎಸೆತಗಳಲ್ಲಿ 64 ರನ್ ಚಚ್ಚಿದರು. ಇದರಲ್ಲಿ 5 ಸಿಕ್ಸರ್ ಸೇರಿತ್ತು. ಇದರಿಂದಾಗಿ ಟೀಂ ಇಂಡಿಯಾ 49.4 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 312 ರನ್ ಗಳಿಸಿ ಗೆಲುವು ಕಂಡಿತು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ