ಆಸೀಸ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಅಶ್ವಿನ್, ಜಡೇಜಾಗೆ ಮತ್ತೆ ರೆಸ್ಟ್
ಭಾನುವಾರ, 10 ಸೆಪ್ಟಂಬರ್ 2017 (18:31 IST)
ಸೆಪ್ಟೆಂಬರ್ 17ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ 15 ಸದಸ್ಯರ ಟೀಮ್ ಇಂಡಿಯಾವನ್ನ ಆಯ್ಕೆ ಮಾಡಲಾಗಿದೆ. ವೇಗಿಗಳಾದ ಉಮೇಶ್ ಯಾದವ್ ಮತ್ತು ಮೊಹಮ್ಮದ್ ಶಮಿ ಕಮ್ ಬ್ಯಾಕ್ ಮಾಡಿದ್ದು, ಶಾರ್ದೂಲ್ ಠಾಕೂರ್`ಗೆ ಕೊಕ್ ನೀಡಲಾಗಿದೆ.
ಆಲ್ರೌಂಡರ್`ಗಳಾದ ಆರ್. ಅಶ್ವಿನ್ ಮತ್ತು ಜಡೇಜಾಗೆ ಮತ್ತೆ ವಿಶ್ರಾಂತಿ ನೀಡಲಾಗಿದೆ. ಯುವರಾಜ್ ಸಿಂಗ್`ಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಆದರೆ, ಯುವರಾಜ್ ಅವರನ್ನ ಕಡೆಗಣಿಸಿಲ್ಲ ವಿಶ್ರಾಂತಿ ನಿಡಿರುವುದಾಗಿ ಆಯ್ಕೆ ಸಮಿತಿ ಸ್ಪಷ್ಟನೆ ನೀಡಿದೆ.ಸದ್ಯ, ವೋಸ್ಟರ್ ಶೇರ್ ಪರ ಕೌಂಟಿ ಆಡುತ್ತಿರುವ ರವಿಚಂದ್ರನ್ ಅಶ್ವಿನ್ 4 ಪಂದ್ಯಗಳಿಗೆ ಒಪ್ಪಂದ ಮಾಡಿಕೊಮಡಿದ್ದಾರೆ. ಸದ್ಯ, 2 ಪಂದ್ಯಗಳು ಮಾತ್ರ ಮುಗಿದಿವೆ. 3ನೇ ಪಂದ್ಯ 12-15ರವರೆಗೆ ಮತ್ತು ಕೊನೆಯ ಪಂದ್ಯ 25-28ರವರೆಗೆ ನಡೆಯಲಿದೆ.
ಶ್ರೀಲಂಕಾ ವಿರುದ್ಧದ ನಿಗದಿತ ಓವರ್`ಗಳ 4 ಪಂದ್ಯಗಳಲ್ಲಿ ಕೇದಾರ್ ಜಾಧವ್ ಕೇವಲ 64 ರನ್ ಗಳಿಸಿದರೂ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಜಾದವ್ ಹಿಂದಿನ ಸಾಧನೆ ಉತ್ತಮವಾಗಿದೆ. ಬ್ಯಾಟಿಂಗ್ ಸ್ಥಿರ ಪ್ರದರ್ಶನದ ಜೊತೆ ಪಾರ್ಟ್ ಟೈಮ್ ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗಿದ್ದಾರೆಂದು ಆಯ್ಕೆ ಸಮಿತಿ ಸ್ಪಷ್ಟನೆ ನೀಡಿದೆ. ಶ್ರೀಲಂಕಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಚಾಹಲ್ ಮತ್ತು ಅಕ್ಷರ್ ಪಠೆಲ್ ಅವರನ್ನ ಮುಂದುವರೆಸುವ ಮೂಲಕ ಭವಿಷ್ಯದ ಸರಣಿಗಳಿಗೆ ಬಲಿಷ್ಠ ತಂಡದ ಸೃಷ್ಟಿ ನಮ್ಮ ಉದ್ದೇಶ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್`ಕೆ ಪ್ರಸಾದ್ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ 3 ಏಕದಿನ ಸರಣಿಗೆ ಆಯ್ಕೆ ಮಾಡಲಾಗಿರುವ 15 ಸದಸ್ಯರ ಟೀಮ್ ಇಂಡಿಯಾ ಇಂತಿದೆ: