ಮೆಲ್ಬೋರ್ನ್: ಹೊಸ ವರ್ಷದ ಆರಂಭಕ್ಕೇ ಟೀಂ ಇಂಡಿಯಾ ಕ್ರಿಕೆಟಿಗರು ಕಠಿಣ ತರಬೇತಿಯಲ್ಲಿ ಪಾಲ್ಗೊಂಡಿದ್ದಾರೆ. ಈ ಮೂಲಕ ಮೂರನೇ ಟೆಸ್ಟ್ ಗೆ ತಯಾರಿ ಆರಂಭಿಸಿದ್ದಾರೆ.
ಜನವರಿ 7 ರಿಂದ ಮೂರನೇ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಇದಕ್ಕೆ ಈಗಲೇ ಕ್ರಿಕೆಟಿಗರು ತಯಾರಿ ಆರಂಭಿಸಿದ್ದಾರೆ. ಕಳೆದ ಟೆಸ್ಟ್ ಪಂದ್ಯ ಗೆದ್ದಿರುವ ಉತ್ಸಾಹದಲ್ಲಿರುವ ರೆಹಾನೆ ಪಡೆ ಈಗ ಮೂರನೇ ಟೆಸ್ಟ್ ಗೆಲ್ಲುವ ತವಕದಲ್ಲಿದೆ. ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ ನೇತೃತ್ವದಲ್ಲಿ ಫೀಲ್ಡಿಂಗ್ ಅಭ್ಯಾಸ ನಡೆಸಿದ್ದಾರೆ.