ವೆಲ್ಲಿಂಗ್ಟನ್: ಧೋನಿ ಬಂದ ಮೇಲಾದರೂ ಟೀಂ ಇಂಡಿಯಾ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಗಳು ಸುಳ್ಳಾಗಿವೆ. ನ್ಯೂಜಿಲೆಂಡ್ ವಿರುದ್ಧ ಐದನೇ ಏಕದಿನ ಪಂದ್ಯದಲ್ಲೂ ಟೀಂ ಇಂಡಿಯಾ ಹೀನಾಯ ಸ್ಥಿತಿಯಲ್ಲಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ ಇತ್ತೀಚೆಗಿನ ವರದಿ ಬಂದಾಗ 4 ವಿಕೆಟ್ ಕಳೆದುಕೊಂಡು 19 ಓವರ್ ಗಳಲ್ಲಿ ಕೇವಲ 56 ರನ್ ಗಳಿಸಿದೆ. ಇದೀಗ ಬ್ಯಾಟಿಂಗ್ ಮಾಡುತ್ತಿರುವ ಅಂಬಟಿ ರಾಯುಡು (12) ಮತ್ತು ವಿಜಯ್ ಶಂಕರ್ (20) ಬಿಟ್ಟರೆ ಉಳಿದ ಬ್ಯಾಟ್ಸ್ ಮನ್ ಗಳು ಎರಡಂಕಿ ಮೊತ್ತವೂ ದಾಟಲಿಲ್ಲ. ನಾಯಕ ರೋಹಿತ್ ಶರ್ಮಾ 2 ರನ್ ಗಳಿಸಿದರೆ ಶಿಖರ್ ಧವನ್ 6 ರನ್ ಗೆ ವಿಕೆಟ್ ಒಪ್ಪಿಸಿದದರು. ಧೋನಿ ಕೇವಲ 1 ರನ್ ಗೆ ಬೌಲ್ಡ್ ಆಗಿದ್ದಾರೆ.
ಕಳೆದ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಬೆನ್ನುಲುಬು ಮುರಿಯಲು ಕಾರಣರಾಗಿದ್ದ ಟ್ರೆಂಟ್ ಬೌಲ್ಟ್ 2 ವಿಕೆಟ್ ಮತ್ತು ಮ್ಯಾಟ್ ಹೆನ್ರಿ 2 ವಿಕೆಟ್ ಕಬಳಿಸಿದ್ದಾರೆ. ಭಾರತದ ಬ್ಯಾಟಿಂಗ್ ಇನ್ನು ಸುಧಾರಿಸುವ ಲಕ್ಷಣ ಕಾಣುತ್ತಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ