ಭಾರತ-ವಿಂಡೀಸ್ ದ್ವಿತೀಯ ಟಿ20 ಇಂದು: ಸರಣಿ ಗೆಲ್ಲುವ ತವಕದಲ್ಲಿ ಟೀಂ ಇಂಡಿಯಾ

ಭಾನುವಾರ, 4 ಆಗಸ್ಟ್ 2019 (11:53 IST)
ಫ್ಲೋರಿಡಾ: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಇಂದು ದ್ವಿತೀಯ ಟಿ20 ಪಂದ್ಯ ನಡೆಯಲಿದೆ. ಇಂದು ಪಂದ್ಯ ಗೆದ್ದರೆ ಭಾರತ ಸರಣಿ ಗೆದ್ದಂತೆ.


ನಿನ್ನೆಯ ಪಂದ್ಯದಲ್ಲಿ ಭಾರತ 4 ವಿಕೆಟ್ ಗಳ ಗೆಲುವು ದಾಖಲಿಸಿತ್ತು. ಇಂದು ಅದೇ ಮೈದಾನದಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ.

ಈ ಪಂದ್ಯದಲ್ಲಿ ಭಾರತ ಶಿಖರ್ ಧವನ್ ಬದಲಿಗೆ ಕೆಎಲ್ ರಾಹುಲ್ ಗೆ ಸ್ಥಾನ ನೀಡುವ ಸಾಧ್ಯತೆಯಿದೆ. ಅದು ಬಿಟ್ಟರೆ ನಿನ್ನೆ ಆಡಿದ ಆಟಗಾರರನ್ನೇ ಇಂದೂ ಕಣಕ್ಕಿಳಿಸುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ