ಬೌಲರ್ ಗಳ ಕರಾಮತ್ತಿನಿಂದ ಗೆದ್ದ ಟೀಂ ಇಂಡಿಯಾ

ಸೋಮವಾರ, 6 ಸೆಪ್ಟಂಬರ್ 2021 (21:10 IST)
ಲಂಡನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯವನ್ನು ಟೀಂ ಇಂಡಿಯಾ 157 ರನ್ ಗಳಿಂದ ಗೆದ್ದುಕೊಂಡಿದೆ.


ಇಂದಿನ ಮೊದಲ ಅವಧಿಯ ಆಟ ನೋಡಿದಾಗ ಈ ಪಂದ್ಯ ಡ್ರಾನತ್ತ ಸಾಗಬಹುದು ಎಂದೇ ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಜೋ ರೂಟ್ ಮತ್ತು ಆರಂಭಿಕ ಹಮೀದ್ 63 ರನ್ ಗಳಿಸಿ ಔಟಾದ ಬಳಿಕ ಟೀಂ ಇಂಡಿಯಾ ಬೌಲರ್ ಗಳು ಪಂದ್ಯದ ಗತಿಯನ್ನೇ ಬದಲಿಸಿದರು.

ಮೊಹಮ್ಮದ್ ಸಿರಾಜ್ ಬಿಟ್ಟು ಉಳಿದೆಲ್ಲಾ ಬೌಲರ್ ಗಳೂ ವಿಕೆಟ್ ಕೀಳುವಲ್ಲಿ ಯಶಸ್ವಿಯಾದರು. ಉಮೇಶ್ ಯಾದವ್3 ವಿಕೆಟ್ ಪಡೆದರೆ ಉಳಿದೆಲ್ಲಾ ಬೌಲರ್ ಗಳು ತಲಾ 2 ವಿಕೆಟ್ ಹಂಚಿಕೊಂಡರು. ಇದರೊಂದಿಗೆ ಇಂಗ್ಲೆಂಡ್ ರನ್ ಗಳಿಗೆ 210 ಆಲೌಟ್ ಆಯಿತು. ಭಾರತ ಸರಣಿಯಲ್ಲಿ 2-1 ರಿಂದ ಮುನ್ನಡೆ ಸಾಧಿಸಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ