ವಿರಾಟ್ ಕೊಹ್ಲಿ-ಧೋನಿ ನಡುವಿನ ಸಂಬಂಧದ ನಿಜ ಬಣ್ಣ ಬಯಲು ಮಾಡಿದ ಬಿಸಿಸಿಐ ಆಡಳಿತಾಧಿಕಾರಿ!

ಸೋಮವಾರ, 19 ಮಾರ್ಚ್ 2018 (09:33 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ನಾಯಕ ಧೋನಿ ನಡುವೆ ಎಂತಹಾ ಸಂಬಂಧವಿದೆ ಎಂಬುದನ್ನು ಬಿಸಿಸಿಐ ಆಡಳಿತಾಧಿಕಾರಿ ವಿನೋದ್ ರಾಯ್ ಬಹಿರಂಗಪಡಿಸಿದ್ದಾರೆ.
 

‘ಅವರಿಬ್ಬರೂ ಪರಸ್ಪರ ಗೌರವಿಟ್ಟುಕೊಂಡಿದ್ದಾರೆ. ಧೋನಿಯನ್ನು ಅವರ ಕ್ರಿಕೆಟ್ ಜ್ಞಾನಕ್ಕೆ ಕೊಹ್ಲಿ ಗೌರವಿಸುತ್ತಾರೆ, ಅದೇ ರೀತಿ ಕೊಹ್ಲಿಯ ಸಾಧನೆಗೆ ಧೋನಿ ಗೌರವಿಸುತ್ತಾರೆ. ವಿರಾಟ್ ಪ್ರಕಾರ ಧೋನಿಯ ಸ್ಥಾನ ತುಂಬುವಂತಹ ವಿಕೆಟ್ ಕೀಪರ್ ಇನ್ನೂ ಭಾರತಕ್ಕೆ ಸಿಕ್ಕಿಲ್ಲ.

ಧೋನಿಯಷ್ಟು ಚುರುಕಾಗಿ ಕೆಲಸ ಮಾಡುವ ವಿಕೆಟ್ ಕೀಪರ್ ಗಳು ಯಾರೂ ಇಲ್ಲ. ಅವರಷ್ಟು ಸೆನ್ಸ್ ಆಫ್ ಕ್ರಿಕೆಟ್ ಇರುವ ವ್ಯಕ್ತಿ ಇನ್ನೊಬ್ಬರಿಲ್ಲ ಎನ್ನುವುದು ಕೊಹ್ಲಿ ಭಾವನೆ’ ಎಂದು ವಿನೋದ್ ರಾಯ್ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ