ವಿರಾಟ್ ಕೊಹ್ಲಿ ಕ್ರಿಕೆಟ್ ಕ್ರಿಸ್ಟಿಯಾನೋ ರೊನಾಲ್ಡೋ ಎಂದವರು ಯಾರು ಗೊತ್ತೇ?

ಬುಧವಾರ, 18 ಏಪ್ರಿಲ್ 2018 (08:15 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರಿಕೆಟ್ ನ ಕ್ರಿಸ್ಟಿಯಾನೋ ರೊನಾಲ್ಡೋ ಎಂದು ವಿಂಡೀಸ್ ಕ್ರಿಕೆಟಿಗ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುವ ಡ್ವಾನ್ ಬ್ರಾವೋ ಬಿರುದು ನೀಡಿದ್ದಾರೆ.

ಕ್ರಿಸ್ಟಿಯಾನೋ ರೊನಾಲ್ಡೋ ಫುಟ್ ಬಾಲ್ ನ ದಂತಕತೆ. ಅವರಿಗೆ ಕೊಹ್ಲಿಯನ್ನು ಹೋಲಿಸಿ ಹೊಗಳಿದ್ದಾರೆ ಬ್ರಾವೋ.

‘ಆತ ಭಾರತದ ಪರವಾಗಿ ಅಥವಾ ಆರ್ ಸಿಬಿ ಪರ ಆಡುವಾಗ ಆತನ ವೈಖರಿ ಗಮನಿಸುತ್ತಿದ್ದೇನೆ. ಹಾಗೆಯೇ ಆತನಲ್ಲಿರುವ ಪ್ರತಿಭೆ ಮತ್ತು ಕ್ರಿಕೆಟ್ ಮೇಲಿನ ಪ್ರೀತಿ ನೋಡುತ್ತೇನೆ. ಆತನ ಸಾಧನೆ ನೋಡಿದರೆ ಹ್ಯಾಟ್ಸ್ ಆಫ್’ ಎಂದು ಬ್ರಾವೋ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ