ತನ್ನನ್ನು ಔಟ್ ಮಾಡಿದ ಆದಿಲ್ ರಶೀದ್ ರನ್ನು ಕಣ್ ಬಿಟ್ಕೊಂಡು ನೋಡುತ್ತಾ ನಿಂತ ವಿರಾಟ್ ಕೊಹ್ಲಿ!

ಬುಧವಾರ, 18 ಜುಲೈ 2018 (10:12 IST)
ಲೀಡ್ಸ್: ಇಂಗ್ಲೆಂಡ್ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಬೌಲಿಂಗ್ ನಲ್ಲಿ ಬೌಲ್ಡ್ ಆಗಿ ನಿರ್ಗಮಿಸಿದರು.

ಆದರೆ ಈ ಬಾಲ್ ಬಂದ ಬಗ್ಗೆ ಸ್ವತಃ ಕೊಹ್ಲಿ ಬೆಕ್ಕಸ ಬೆರಗಾದರು. ಕೊಹ್ಲಿ 71 ರನ್ ಗಳಿಸಿದ್ದಾಗ ಸ್ಪಿನ್ನರ್ ರಶೀದ್ ಮಾಡಿದ ಬಾಲ್ ತಿರುವು ಪಡೆದು ವಿಕೆಟ್ ಎಗರಿಸಿತ್ತು. ಈ ಅದ್ಭುತ ಬಾಲ್ ನೋಡಿ  ಬೆರಗಾದ ಕೊಹ್ಲಿ ಪೆವಿಲಿಯನ್ ಗೆ ಹೋಗುವ ಬದಲು ನೋಡುತ್ತಾ ಕುಳಿತರು.

ಈ ಬಗ್ಗೆ ವಿರಾಟ್ ಕೊಹ್ಲಿಗೆ ಸಮಾರೋಪ ಸಮಾರಂಭದಲ್ಲಿ ಪ್ರಶ್ನಿಸಿದಾಗಲೂ ರಶೀದ್ ಮಾಡಿದ ಆ ಬಾಲ್ ನ್ನು ಅದ್ಭುತ ಎಂದು ಹೊಗಳಿದರು. ‘ವಾವ್ ಅದು ಅದ್ಭುತ ಬಾಲ್. ರಶೀದ್ ಮೊದಲೆಲ್ಲಾ ಹೆಚ್ಚು ತಿರುವು ಪಡೆಯುತ್ತಿದ್ದರು. ಆದರೆ ಈಗ ಅವರ ಬೌಲಿಂಗ್ ನಲ್ಲಿ ಅಷ್ಟೊಂದು ತಿರುವು ಸಿಗಲ್ಲ. ಹಾಗಿದ್ದರೂ ಈ ಬಾಲ್ ಮಾತ್ರ ಅದ್ಭುತ’ ಎಂದು ಕೊಹ್ಲಿ ಹೊಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ