ಶೂನ್ಯಕ್ಕೆ ಔಟಾಗಿ ಕುಖ್ಯಾತಿಗೊಳಗಾದ ವಿರಾಟ್ ಕೊಹ್ಲಿ
ಗಂಗೂಲಿ 13 ಬಾರಿ ಶೂನ್ಯ ಸಂಪಾದಿಸಿದ್ದರು. ಆ ದಾಖಲೆ ಈಗ ಕೊಹ್ಲಿ ಪಾಲಾಗಿದೆ. ರನ್ ಮೆಷಿನ್ ಸಾಕಷ್ಟು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಆದರೆ ಇದರ ಜೊತೆಗೆ ಈಗ ಬೇಡದ ದಾಖಲೆಯೊಂದೂ ಸೇರಿಕೊಂಡಿದೆ. ಇತ್ತೀಚೆಗಿನ ದಿನಗಳಲ್ಲಿ ಎಂದಿನ ಫಾರ್ಮ್ ಪ್ರದರ್ಶಿಸದ ಕೊಹ್ಲಿ ಬಗ್ಗೆ ಸಾಕಷ್ಟು ಟೀಕೆ ಕೇಳಿಬರುತ್ತಿದೆ. ಅದರಲ್ಲೂ ಸೀಮಿತ ಓವರ್ ಗಳ ಪಂದ್ಯದಲ್ಲಿ ಅವರು ನಾಯಕತ್ವ ತ್ಯಜಿಸಿ ಬ್ಯಾಟಿಂಗ್ ಬಗ್ಗೆ ಗಮನ ಹರಿಸಲಿ ಎಂಬ ಸಲಹೆಗಳು ಕೇಳಿಬರುತ್ತಿವೆ.