ಭಾರತ-ವೆಸ್ಟ್ ಇಂಡೀಸ್ ಟಿ20: ವಿಂಡೀಸ್ ಆರಂಭಿಕರ ವಿಕೆಟ್ ಪತನ

ಗುರುವಾರ, 3 ಆಗಸ್ಟ್ 2023 (20:23 IST)
File photo
ಟ್ರಿನಿಡಾಡ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್‍ ಇಂಡೀಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ.

ವಿಂಡೀಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಕೈಲ್ ಮೇಯರ್ಸ್ ಮತ್ತು ಬ್ರೆಂಡನ್ ಕಿಂಗ್ ಉತ್ತಮ ಆರಂಭ ನೀಡಿದ್ದಾರೆ. ಆದರೆ ಐದನೇ ಓವರ್ ಆರಂಭವಾಗುತ್ತಿದ್ದಂತೇ ಚಾಹಲ್ ಬೌಲಿಂಗ್ ನಲ್ಲಿ ಮೇಯರ್ಸ್ 1 ರನ್, ಕಿಂಗ್ 18 ಎಸೆತಗಳಿಂದ ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಇತ್ತೀಚೆಗಿನ ವರದಿ ಬಂದಾಗ ವಿಂಡೀಸ್ 2 ವಿಕೆಟ್ ನಷ್ಟಕ್ಕೆ 30 ರನ್ ಗಳಿಸಿದೆ.

ಈ ಪಂದ್ಯಕ್ಕೆ ಟೀಂ ಇಂಡಿಯಾ ಪರ ಮೂವರು ಸ್ಪಿನ್ನರ್ ಗಳನ್ನು ಕಣಕ್ಕಿಳಿಸಿದೆ. ಅಕ್ಸರ್ ಪಟೇಲ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್ ತಂಡದಲ್ಲಿದ್ದಾರೆ. ವೇಗಿಗಳಾಗಿ ಮುಕೇಶ್ ಕುಮಾರ್ ಅರ್ಷ್ ದೀಪ್ ಸಿಂಗ್ ಇದ್ದಾರೆ. ಬ್ಯಾಟಿಂಗ್ ನಲ್ಲಿ ತಿಲಕ್ ವರ್ಮಗೆ ಅವಕಾಶ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ