ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಮಾಲಿಕರು ಇವರೇ: ಇನ್ಮೇಲೆ ಹೆಸರೂ ಚೇಂಜ್
ಈ ಹಿಂದೆ ವಿಜಯ್ ಮಲ್ಯ ಒಡೆತನದಲ್ಲಿದ್ದ ಆರ್ ಸಿಬಿ ತಂಡವನ್ನು ಲಂಡನ್ ಮೂಲದ ಡಿಯಾಜಿಯೊ ಸಂಸ್ಥೆ ಖರೀದಿ ಮಾಡಿತ್ತು. ಇದೀಗ ಭಾರತದ ಆದಿತ್ಯ ಬಿರ್ಲಾ ಗ್ರೂಪ್, ಟೈಮ್ಸ್ ಗ್ರೂಪ್, ಬೋಲ್ಡ್ ವೆಂಚರ್ಸ್ ಮತ್ತು ಬ್ಲ್ಯಾಕ್ ಸ್ಟೋನ್ ಸಂಸ್ಥೆಗಳು ಹೊಸ ಮಾಲಿಕರಾಗಿದ್ದಾರೆ. ಬರೋಬ್ಬರಿ 16700 ಕೋಟಿ ರೂ. ಗೆ ಆರ್ ಸಿಬಿ ತಂಡ ಬಿಕರಿಯಾಗಿದೆ.
ಇದು ದಾಖಲೆಯ ಮೊತ್ತವಾಗಿದ್ದು ಈ ಬಾರಿಯ ಐಪಿಎಲ್ ಮುಗಿದ ಬಳಿಕ ಮಾಲಿಕತ್ವ ಹಸ್ತಾಂತರದ ಪ್ರಕ್ರಿಯೆಗಳು ನಡೆಯಲಿವೆ. ಈ ಹಿಂದೆ ವಿಜಯ್ ಮಲ್ಯ ತಮ್ಮ ಮದ್ಯದ ಬ್ರ್ಯಾಂಡ್ ರಾಯಲ್ ಚಾಲೆಂಜರ್ಸ್ ಹೆಸರನ್ನು ತಂಡಕ್ಕೆ ಇಟ್ಟಿದ್ದರು. ಬಳಿಕ ಈ ಹೆಸರೇ ಮುಂದುವರಿದಿತ್ತು. ಆದರೆ ಈಗಿನ ಹೊಸ ಮಾಲಿಕರು ತಂಡದ ಹೆಸರು ಬದಲಾವಣೆ ಮಾಡಬಹುದೇ ಎಂಬ ಅನುಮಾನಗಳಿವೆ. ಹಾಗಿದ್ದರೂ ಆರ್ ಸಿಬಿ ಎನ್ನುವುದು ಅಭಿಮಾನಿಗಳ ಪಾಲಿಗೆ ಭಾವನೆಯಾಗಿದ್ದು, ಹೆಸರು ಬದಲಾವಣೆ ಅಷ್ಟು ಸುಲಭವಲ್ಲ. ಸದ್ಯಕ್ಕೆ ಈ ಬಗ್ಗೆ ಸಸ್ಪೆನ್ಸ್ ಹಾಗೆಯೇ ಮುಂದುವರಿಯಲಿದೆ.