ವಿರಾಟ್-ಅನುಷ್ಕಾ ಲವ್ ಸ್ಟೋರಿಯೇ ಸ್ಪೂರ್ತಿಯಂತೆ ಇವರಿಗೆ!

ಶನಿವಾರ, 13 ಜೂನ್ 2015 (12:30 IST)
ಅನುಷ್ಕಾ ಪ್ರೀತಿಯ ಅಮಲಿನಲ್ಲಿಯೇ ವಿರಾಟ್ ಬ್ಯಾಟಿಂಗ್‌ನಲ್ಲಿ ವಿಫಲರಾಗುತ್ತಿರುವುದಕ್ಕೆ ಕಾರಣ ಎಂದು ಕ್ರಿಕೆಟ್ ಅಭಿಮಾನಿಗಳು ಬೊಬ್ಬೆ ಹಾಕುತ್ತಿದ್ದರೆ ಪಕ್ಕದ ಬಾಂಗ್ಲಾದ ಕ್ರಿಕೆಟಿಗನ ಮಾಜಿ ಪ್ರೇಯಸಿಯೋರ್ವಳು ಅವರಿಬ್ಬರ ಪ್ರೀತಿಯೇ ನನಗೆ ಸ್ಪೂರ್ತಿ ಎನ್ನುತ್ತಿದ್ದಾಳೆ.

ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗ ರುಬೆಲ್ ಹುಸೇನ್ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದ ನಟಿ ನಜ್ನಿನ್ ಅಖ್ತರ್ ಹ್ಯಾಪಿ  ಇನ್ನು ತಾವು ರುಬೆಲ್ ಅವರನ್ನು ಪ್ರೀತಿಸುತ್ತಿದ್ದು, ಇದಕ್ಕೆ ವಿರಾಟ್- ಅನುಷ್ಕಾರವರ ಪ್ರೀತಿಯ ಕಥೆಯೇ ಸ್ಪೂರ್ತಿ ಎಂದಿದ್ದಾರೆ. ಜತೆಗೆ ವಿರಾಟ್ ಮತ್ತು ಸೌರವ್ ಗಂಗೂಲಿ ತನ್ನ ಮೆಚ್ಚಿನ ಕ್ರಿಕೆಟಿಗರು ಎಂದು ಸಹ ಹೇಳಿಕೊಂಡಿದ್ದಾಳೆ. 
 
ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಹ್ಯಾಪಿ, "ವಿರಾಟ್ ಮತ್ತು ಅನುಷ್ಕಾ ಪ್ರೀತಿ ನಿಜಕ್ಕೂ ಗ್ರೇಟ್. ನಮ್ಮ ಪ್ರೀತಿ ಕೂಡ ಅವರಂತೆ ಅದೃಷ್ಟ ಹೊಂದಿರಬೇಕಿತ್ತು ಎಂದು ಅನ್ನಿಸುತ್ತಿರುತ್ತದೆ. ಈಗಲೂ ನಾನು ರುಬೆಲ್‌ನನ್ನು ಪ್ರೀತಿಸುತ್ತಿದ್ದೇನೆ. ಆದರೆ ವಿವಾದವನ್ನು ಮತ್ತೆ ದೊಡ್ಡದು ಮಾಡುವುದು ನನಗೆ ಇಷ್ಟವಿಲ್ಲ ಎಂದು ಆತನಿಂದ ದೂರವಿದ್ದೇನೆ", ಎಂದಿದ್ದಾರೆ.  
 
ನಜ್‌ನೈನ್ ಅಖ್ತರ್ ಹ್ಯಾಪಿ ವಿಶ್ವಕಪ್ ಆರಂಭವಾಗುವ ಕೆಲ ದಿನಗಳ ಮುನ್ನ ಮಾಧ್ಯಮಗಳಲ್ಲಿ ಸುದ್ದಿ ಮಾಡಿದ್ದಳು. ಬಾಂಗ್ಲಾ ಕ್ರಿಕೆಟ್ ತಂಡದ ಪ್ರಮುಖ ಬೌಲರ್ ರುಬೆಲ್ ಹುಸೇನ್ ವಿರುದ್ಧ ಹ್ಯಾಪಿ ವಿರುದ್ಧ ಆಕೆ ಅತ್ಯಾಚಾರದ ಆರೋಪ ಮಾಡಿದ್ದಳಲ್ಲದೇ ಕೋರ್ಟ್‌ನಲ್ಲಿ ಕೇಸ್‌ನ್ನು ಕೂಡ ದಾಖಲಿಸಿದ್ದಳು. 
 
"ರುಬೆಲ್ ಮದುವೆಯಾಗುವುದಾಗಿ ನಂಬಿಸಿ ನನ್ನ ಜೊತೆ ದೈಹಿಕ ಸಂಬಂಧ ಬೆಳೆಸಿದ್ದ. ಈಗ ವಿವಾಹವಾಗಲು ನಿರಾಕರಿಸುತ್ತಿದ್ದಾನೆ" ಎಂದು ಆಕೆ ಆರೋಪಿಸಿದ್ದಳು.. ವಿಶ್ವಕಪ್ ಆಡಲಿರುವ ತಂಡದಲ್ಲಿ  ಸ್ಥಾನ ಪಡೆದಿದ್ದ ಆತ ಈ ಕಾರಣದಿಂದ  ಕಂಬಿ ಎಣಿಸುವಂತಾಗಿತ್ತು. ರಾಷ್ಟ್ರದ ಹಿತಾಸಕ್ತಿಯ ಕಾರಣ ಮುಂದಿಟ್ಟಿದ್ದ ಕ್ರಿಕೆಟಿಗನ ವಕೀಲ ಬೌಲರ್ ಜಾಮೀನು ದೊರಕಿಸಿಕೊಡಲು ಯಶಸ್ವಿಯಾಗಿದ್ದರು. 
 
ತಮ್ಮ ವಿರುದ್ಧದ ಆರೋಪಗಳ ಕುರಿತು ತಲೆ ಕೆಡಿಸಿಕೊಳ್ಳದ ರುಬೆಲ್ ವಿಶ್ವಕಪ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿ ತಮ್ಮ ತಂಡ ಕ್ವಾರ್ಟರ್ ಫೈನಲ್ ತಲುಪಲು ಕಾರಣರಾಗಿದ್ದರು. ಇಂಗ್ಲೆಂಡ್ ವಿರುದ್ಧ ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದ ರುಬೆಲ್ ದೇಶದ ಹೀರೋ ಎನಿಸಿಕೊಂಡಾಗ ಇಂಪ್ರೆಸ್ ಆದ ನಟಿ ಆತನ ಮೇಲೆ ನೀಡಿದ್ದ ದೂರನ್ನು ಹಿಂತಿರುಗಿ ಪಡೆದುಕೊಂಡಿದ್ದಳು.
 
"ಈಗ ನಾ ಆತನನ್ನು ಕ್ಷಮಿಸಿದ್ದೇನೆ. ನನಗೆ ಆತನ ಮೇಲೆ ಇನ್ನೂ ಪ್ರೀತಿ ಇದೆ. ತನ್ನ ಮಾಜಿ ಗೆಳೆಯನಿಗಾಗಿ ನಾನು ಭಾರತ- ಬಾಂಗ್ಲಾ ನಡುವೆ ನಡೆಯುವ ಸೆಮಿಫೈನಲ್ ಪಂದ್ಯವನ್ನು  ವೀಕ್ಷಿಸುತ್ತೇನೆ.ಎಲ್ಲ ದೇಶವಾಸಿಗಳಂತೆ ನಾನು ಕೂಡ ನಮ್ಮ ದೇಶ ಪ್ರಶಸ್ತಿ ಗೆಲ್ಲಲಿ ಎಂದು ಬಯಸುತ್ತೇನೆ. ಜತೆಗೆ ರುಬೆಲ್ ಉತ್ತಮ ಪ್ರದರ್ಶನ ನೀಡಲಿ ಎಂದು ಹಾರೈಸುತ್ತೇನೆ", ಎಂದು ಆಕೆ ಹೇಳಿದ್ದಳು. 

ವೆಬ್ದುನಿಯಾವನ್ನು ಓದಿ