ಮಹಿಳಾ ಟಿ20 ವಿಶ್ವಕಪ್: ದ.ಆಫ್ರಿಕಾ ಮಹಿಳೆಯರ ಚಮಕ್, ಚೊಚ್ಚಲ ಫೈನಲ್
ನಿನ್ನೆ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಫ್ರಿಕಾ ಎದುರಾಳಿಗೆ ಗೆಲ್ಲಲು 165 ರನ್ ಗಳ ಗುರಿ ನೀಡಿದ್ದರು. ಆದರೆ ಇಂಗ್ಲೆಂಡ್ ಆರಂಭ ಉತ್ತಮವಾಗಿದ್ದರೂ ಬಳಿಕ ವಿಕೆಟ್ ಕಳೆದುಕೊಂಡಿದ್ದರಿಂದ ಅಂತಿಮವಾಗಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 158 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಆಫ್ರಿಕಾ 6 ರನ್ ಗಳ ರೋಚಕ ಜಯ ಸಾಧಿಸಿತು.
ಈ ಮೂಲಕ ಆಫ್ರಿಕಾ ಮೊದಲ ಬಾರಿಗೆ ಟಿ20 ವಿಶ್ವಕಪ್ ಫೈನಲ್ ತಲುಪಿದ ಸಾಧನೆ ಮಾಡಿದೆ. ಪುರುಷ ಕ್ರಿಕೆಟಿಗರೂ ಇದುವರೆಗೆ ಆಫ್ರಿಕಾಗೆ ಯಾವುದೇ ಫಾರ್ಮ್ಯಾಟ್ ನಲ್ಲಿ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇದೀಗ ಮಹಿಳೆಯರಿಗೆ ಈ ಅಪೂರ್ವ ಅವಕಾಶ ಸಿಕ್ಕಿದ್ದು, ನಾಳೆ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಚೊಚ್ಚಲ ವಿಶ್ವಕಪ್ ಕಿರೀಟ ಹೊತ್ತು ಮೆರೆಯಲಿದೆಯಾ ಕಾದು ನೋಡಬೇಕಿದೆ.