WPL 2026: ಆರ್ ಸಿಬಿ ಪರ ಅದ್ಭುತ ಬೌಲಿಂಗ್ ಮಾಡಿದ ವಿದೇಶೀ ತಾರೆಯರು
ಮೊದಲ ಪಂದ್ಯದಲ್ಲೇ ಆರ್ ಸಿಬಿ ನಾಯಕಿ ಸ್ಮೃತಿ ಮಂಧಾನ ಟಾಸ್ ಗೆದ್ದು ಶುಭಾರಂಭ ಮಾಡಿದ್ದಾರೆ. ತೇವಾಂಶವಿರುವ ಕಾರಣಕ್ಕೆ ಸ್ಮೃತಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ನಾಯಕಿಯ ಆಯ್ಕೆ ಸಮರ್ಥಿಸುವಂತೆ ಆಡಿದ ಆರ್ ಸಿಬಿ ಬೌಲರ್ ಗಳು ಅದರಲ್ಲೂ ವಿಶೇಷವಾಗಿ ನಡಿನ್ ಡಿ ಕ್ಲರ್ಕ್ 4 ವಿಕೆಟ್ ಕಬಳಿಸಿ ಮಿಂಚಿದರು.
ಇನ್ನು ಆರ್ ಸಿಬಿ ಪರ ಚೊಚ್ಚಲ ಪಂದ್ಯವಾಡಿದ ಲಾರೆನ್ ಬೆಲ್ 1 ವಿಕೆಟ್ ಕಬಳಿಸಿದರೆ ಮತ್ತೊಂದು ವಿಕೆಟ್ ಕನ್ನಡತಿ ಶ್ರೇಯಾಂಕ ಪಾಟೀಲ್ ಪಾಲಾಯಿತು. ಇನ್ನು ಮುಂಬೈ ಬ್ಯಾಟಿಂಗ್ ವಿಚಾರಕ್ಕೆ ಬಂದರೆ ಸಜೀವನ್ ಸಜನಾ 25 ಎಸೆತಗಳಿಂದ 45 ರನ್ ಗಳಿಸಿದರೆ ನಿಕೊಲಾ ಕ್ಯಾರೀ 29 ಎಸೆತಗಳಿಂದ 40 ರನ್ ಗಳಿಸಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ 20 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಮುಂಬೈ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಆರ್ ಸಿಬಿ ಇತ್ತೀಚೆಗಿನ ವರದಿ ಬಂದಾಗ 2 ಓವರ್ ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 20 ರನ್ ಗಳಿಸಿದೆ.