ಕ್ರಿಕೆಟ್ ವಿಷಯದಲ್ಲಿ ನನ್ನ ಹೆಸರು ಎಳೆದು ತರಬೇಡಿ: ಚಹಾ ವಿವಾದಕ್ಕೆ ಅನುಷ್ಕಾ ಶರ್ಮಾ ತಿರುಗೇಟು
ನಿಮಗೆ ತಂಡದ ವಿಚಾರದಲ್ಲಿ, ಕ್ರಿಕೆಟಿಗರ ಬಗ್ಗೆ ಅಥವಾ ಮಂಡಳಿ ಬಗ್ಗೆ ಟೀಕೆ ಮಾಡುವುದಿದ್ದರೆ ಮಾಡಬಹುದು. ಆದರೆ ಅದಕ್ಕೆ ನನ್ನ ಹೆಸರು ಎಳೆದು ತರಬೇಡಿ. ನಾನು ಸ್ವತಂತ್ರ ಮಹಿಳೆ. ನನಗೆ ನನ್ನದೇ ವೃತ್ತಿ ಜೀವನವಿದೆ. ನನ್ನ ಬದುಕನ್ನು ನಾನೇ ಕಟ್ಟಿಕೊಂಡಿದ್ದೇನೆ. ಅಷ್ಟಕ್ಕೂ ವಿಶ್ವಕಪ್ ವೇಳೆ ನಾನು ನನ್ನದೇ ಸ್ವಂತ ಖರ್ಚಿನಲ್ಲಿ ಇಂಗ್ಲೆಂಡ್ ಗೆ ತೆರಳಿದ್ದೆ. ಮತ್ತು ಅಲ್ಲಿ ಕ್ರಿಕೆಟಿಗರ ಕುಟುಂಬದವರಿಗೆ ಮೀಸಲಿದ್ದ ಆಸನದಲ್ಲಿ ಕೂತಿದ್ದೆ. ಅಷ್ಟಕ್ಕೂ ನಾನು ಚಹಾ ಸೇವಿಸಲ್ಲ. ಕಾಫಿ ಕುಡಿಯುತ್ತೇನೆ ಎಂದು ಅನುಷ್ಕಾ ಸುದೀರ್ಘವಾಗಿ ತಿರುಗೇಟು ನೀಡಿದ್ದಾರೆ.