ಯೆಸ್... ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲೇ ಕ್ರಿಕೆಟ್ ಫೀವರ್ ಶುರುವಾಗಿದೆ. ಅದರಲ್ಲೂ ವಿಶ್ವಕಪ್ ಕ್ರಿಕೆಟ್ ಅಂದ್ರೆ ಅಂತೂ, ಅಬ್ಬಬ್ಬಾ ಅದೆಲ್ಲೇ ಮ್ಯಾಚ್‌ಗಳು ನಡೆಯುತ್ತಿರಲೀ, ಅಲ್ಲಿಗೆ ಅಭಿಮಾನಿಗಳ ದಂಡೇ ಹೋಗಿ ಮುಟ್ಟಿರುತ್ತೆ... ಬಹುಶಃ ಕ್ರಿಕೆಟ್‌ಗೆ ಇರುವಷ್ಟು ಕ್ರೇಜ್ ಭಾರತದಲ್ಲಿ ಯಾವ ಕ್ರೀಡೆಗೂ ಇಲ್ಲ ಅನ್ನಬಹುದು...?
ಅದೊಂದು ಕಾಲವಿತ್ತು ಸಚಿನ್ ಬ್ಯಾಟಿಂಗ್ ಬರ್ತಾರೆ, ಅಂದರೆ ಬರೀ ಭಾರತದ ಕ್ರಿಕೆಟ್ ಅಭಿಮಾನಿಗಳು ಮಾತ್ರವಲ್ಲ, ಇಡೀ ವಿಶ್ವದ ಮೂಲೆ ಮೂಲೆಯಿಂದಲೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್ ವೈಭವವನ್ನು ಕಣ್ಣು ತುಂಬಿಕೊಳ್ಳಲು ಓಡೋಡಿ ಬರ್ತಾ ಇದ್ದರು. ಬಟ್ ಇವಾಗ ಮುಂಬೈಕರ್‌ನ ಬ್ಯಾಟಿಂಗ್ ಸವಿಯಲು, ಕೋಟ್ಯಾಂತರ ಅಭಿಮಾನಿಗಳು ಬಯಸಿದರೂ ಕೂಡ, ಅದು ಸಾಧ್ಯವಾಗದ ಮಾತು... ಅದು ಮತ್ತೇ ದೇಶದ ಪರವಾಗಿ ಆಡುವ ನಿಟ್ಟಿನಲ್ಲಿ ನೋಡೋದಾದರೇ..?
ಸಚಿನ್ ಕ್ರೀಸ್‌ಗೆ ಅಂಟಿಕೊAಡು ನಿಂತರೆ ಸಾಕು, ಎದುರಾಳಿ ತಂಡಗಳಿಗೆ ನಡುಕ ಶುರುವಾಗಿ ಬಿಡ್ತಾ ಇತ್ತು. ಅಲ್ಲಿಗೆ ಸಚಿನ್ ಬ್ಯಾಟ್‌ನಿಂದ ರನ್‌ಗಳ ಸುರಿಮಳೆ ಆಗಿ ಹೋದ್ರೆ, ಅವತ್ತು ಭಾರತ ತಂಡ ಅರ್ಧ ಗೆದ್ದಂತೆ ಅನ್ನೋ ಫೀಲ್ ಅಭಿಮಾನಿಗಳ ಎದೆಯನ್ನು ಆವರಿಸಿಕೊಳ್ಳುತ್ತಿತ್ತು.
ಯೆಸ್. ಸಚಿನ್ ಇವತ್ತು ಭಾರತ ಕ್ರಿಕೆಟ್ ತಂಡದ ಭಾಗವಾಗಿ ಆಡೋದಕ್ಕೆ ಸಾಧ್ಯವಿಲ್ಲ. ಅದಾಗಲೇ ಮಾಸ್ಟರ್‌ಬ್ಲಾಸ್ಟರ್ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿ, ದಶಕಗಳೇ ಕಳೆದಿವೆ.
ಇನ್ನೂ ಸಚಿನ್ ಕ್ರಿಕೆಟ್ ವಿದಾಯ ಹೇಳಿದ ಮೇಲೆ ಭಾರತಕ್ಕೆ ಮತ್ತೊಬ್ಬ ಸಚಿನ್ ಸಿಕ್ತಾರಾ, ಅನ್ನುವ ಮಾತುಗಳು ಸಚಿನ್ ಭಾರತ ತಂಡಕ್ಕೆ ಆಡುವಾಗಲೆ ಕೇಳಿ ಬಂದಿತ್ತು. ಅದರಲ್ಲೂ ಸಾಧನೆಗಳ ಶಿಖರವನ್ನೇರಿದ್ದ ಈ ವಾಮನ ಮೂರ್ತಿಯ ರೆಕಾರ್ಡ್ಗಳನ್ನು ಮುರಿಯೋ, ಮತ್ತೊಬ್ಬ ಬ್ಯಾಟರ್ ಭಾರತಕ್ಕೆ ಸಿಕ್ತಾನಾ ಅನ್ನುವ ಮಾತುಗಳು ಬೇಜಾನ್ ಸದ್ದು ಮಾಡಿದ್ದವು.
ಹೌದು ಸಚಿನ್ ವಿದಾಯ ಹೇಳಿ ಹೋದ ಮೇಲೆ ಮತ್ತೊಬ್ಬ ತೆಂಡೂಲ್ಕರ್ ಯಾರಾಪ್ಪಾ ಅನ್ನುವ ಟಾಕ್ ಕೇಳಿ ಬರುವ ಹೊತ್ತಲ್ಲೇ, ಈ ಕಡೆ ಡೆಲ್ಲಿಯ ಕಡೆಯಿಂದ ಅದೊಂದು ಅದ್ಭುತ ಪ್ರತಿಭೆ ಅನಾವರಣವಾಗಿತ್ತು. ಅದು ಇದೇ ಕಿಂಗ್ ಕೊಹ್ಲಿಯ ರೂಪದಲ್ಲಿ. ನಿಜ, ಶ್ರೀಲಂಕಾ ವಿರುದ್ಧ ೨೦೦೯ರಲ್ಲಿ ಮೊದಲ ಸೆಂಚುರಿ ಬಾರಿಸಿದ್ದ ವಿರಾಟ್ ಇನ್ನಿಂಗ್ಸ್ ಇಡೀ ವಿಶ್ವ ಕ್ರಿಕೆಟ್‌ನನ್ನೆ ದಂಗು ಬಡಿಸಿತ್ತು. ಅಬ್ಬಬ್ಬಾ ಅದೇನ್ ಆಟ ಅಂತೀರಾ... ಅವತ್ತೆ ಕಿಂಗ್ ಕೊಹ್ಲಿಯ ಬ್ಯಾಟಿನಿಂದ ಫಸ್ಟ್ ಏಕದಿನ ಶತಕ ಮೂಡಿ ಬಂದಿತ್ತು..
ಸಚಿನ್ ಜೊತೆಯಲ್ಲೇ ಆಡುತ್ತಾ ಬಂದಿದ್ದ, ಈ ರನ್ ಸಿಡಿಲಮರಿ ವಿರಾಟ್ ಕೊಹ್ಲಿ ಹೆಚ್ಚಾಗಿ ತಾನೊಬ್ಬ ಪರ್ಫೇಕ್ಟ್ ಕ್ರಿಕೆಟರ್ ಅಂತ ಗೊತ್ತಾಗಿದ್ದು, ೨೦೧೧ರ ವಿಶ್ವಕಪ್ ಗೆದ್ದ ನಂತರವೇ. ಆದ್ರೆ ಅಲ್ಲಿಯವರೆಗೂ ಕೊಹ್ಲಿಯಿಂದ ಸಚಿನ್ ದಾಖಲೆ ಸರಿಗಟ್ಟೋದು ಸಾಧ್ಯನಾ ಇಲ್ಲವಾ ಅನ್ನೋದರ ಬಗ್ಗೆ ಬೇರೆ ಯಾರಿಗ್ಯಾಕೆ ಸ್ವತಃ ವಿರಾಟ್‌ಗೇ ಗೊತ್ತಿರಲಿಲ್ಲ ಅನ್ನಿಸುತ್ತೆ..?
ಸಚಿನ್ ನಂತರ ಮತ್ಯಾರು ಅನ್ನುವ ಪ್ರಶ್ನೆಗೆ ವಿರಾಟ್ ಕೊಹ್ಲಿಯೆ ಉತ್ತರ.....ಯಾಕಂದ್ರೆ ಸಚಿನ್ ಶತಕಗಳ ದಾಖಲೆಗಳನ್ನು ಸರಿಗಟ್ಟಿರುವ ವಿರಾಟ್ ಕೊಹ್ಲಿ, ಇನ್ನೊಂದು ಸೆಂಚುರಿ ಬಾರಿಸಿ ಬಿಟ್ಟರೂ ಅಂದ್ರೆ, ಕ್ರಿಕೆಟ್ ದೇವರನ್ನು ಮೀರಿ ಒಂದು ಹೆಜ್ಜೆ ಮುಂದೇ ಇಟ್ಟಂತೆ ಅಲ್ಲವೇ..? ಅರ್ಥಾತ್ ಶತಕಗಳ ವಿಚಾರದಲ್ಲಿ..?
ಹೌದು ವಿರಾಟ್ ಕೊಹ್ಲಿಗೆ ಸಚಿನ್ ದಾಖಲೆಯನ್ನು ಬ್ರೇಕ್ ಮಾಡೋದಕ್ಕೆ ಇನ್ನೊಂದೇ ಹೆಜ್ಜೆ ಮಾತ್ರ ಬಾಕಿ ಇದೆ. ಈಗಾಗಲೇ ೪೯ ಶತಕಗಳನ್ನು ಏಕದಿನ ಕ್ರಿಕೆಟ್‌ನಲ್ಲಿ ಚಚ್ಚಿರುವ ಕೊಹ್ಲಿ, ಕ್ರಿಕೆಟ್ ದೇವರಿಗೆ ಸಮನಾಗಿದ್ದಾರೆ. ಆದ್ರೆ ಇನ್ನೊಂದು ಶತಕ ವಿರಾಟ್ ಬ್ಯಾಟ್‌ನಿಂದ ಸಿಡಿದು ಬಿಟ್ಟರೇ, ಏಕದಿನ ಕ್ರಿಕೆಟ್ ಮಾದರಿಯಲ್ಲಿ ಟಾಪ್ ಒನ್ ಸ್ಥಾನಕ್ಕೆ ಬಂದು ನಿಲ್ಲಲಿದ್ದಾರೆ ಈ ಕ್ರಿಕೆಟ್ ಲೋಕದ ರನ್ ರಾಕ್ಷಸ. ಅಲ್ಲಿಗೆ ಕ್ರಿಕೆಟ್ ದೇವರ ಹೆಸರಿನಲ್ಲಿದ್ದ ಅಸಲಿ ದಾಖಲೆ ಮುರಿದಂತೆ ಆಗಲಿದೆ..!??
ಸಚಿನ್ ಏಕದಿನ ಮತ್ತು ಟೆಸ್ಟ್ ಮಾದರಿಯಲ್ಲಿ ಶತಕಗಳ ಶತಕ ಪೂರೈಸಿ, ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ ಏಕದಿನ ಮಾದರಿಯಲ್ಲಿ ಇನ್ನೊಂದು ಶತಕವನ್ನು ಹೊಡೆದರೆ ಸಚಿನ್ ದಾಖಲೆ ಮುರಿದು ಬೀಳಲಿದೆ. ಅಲ್ಲಿಗೆ ಟೆಸ್ಟ್ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟ್‌ನಿಂದ ೨೯ ಸೆಂಚುರಿ ಮಾತ್ರ ಸಿಡಿದಿದೆ. ಅಲ್ಲಿಗೆ ಶತಕಗಳ ಶತಕ ಬಾರಿಸುವ ಕಾಲವೇನೂ ದೂರವಿಲ್ಲ. ಯಾಕಂದರೆ ಕಿಂಗ್ ಕೊಹ್ಲಿ ಇದೇ ರೀತಿ ಬ್ಯಾಟ್‌ನಿಂದ ರನ್‌ಗಳ ಮಳೆಯನ್ನು ಹರಿಸುತ್ತಿದ್ದಾರೆ, ಶತಕಗಳ ಶತಕ ಬರಿಸೋದು ಹೇಳಿಕೊಳ್ಳುವಂತಹ ಕಷ್ಟ ಅನ್ನಿಸದು..?
ಕ್ರಿಕೆಟ್‌ನ್ನು ಹೆಚ್ಚಾಗಿ ನೋಡಿದವರಿಗೆ, ಅನ್ನಿಸೋದು ಇಷ್ಟೇ, ಸಚಿನ್‌ಗಿಂತಲೂ ವೇಗವಾಗಿ ಬ್ಯಾಟ್ ಬೀಸಿದರಾ ಕಿಂಗ್ ಕೊಹ್ಲಿ ಅನ್ನೋದು. ವಿರಾಟ್ ಸದ್ಯ ಸಚಿನ್ ಅವರ ಏಕದಿನ ಶತಕಗಳ ದಾಖಲೆಗಳನ್ನು ಸರಿಗಟ್ಟಿರೋದನ್ನ ನೋಡಿದರೆ, ಕ್ರಿಕೆಟ್ ದೇವರಿಗಿಂತ ಬಿರುಸಿನ ವೇಗದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ ಅನ್ನೋದು ಗೊತ್ತಾಗುತ್ತಿದೆ. ಅಲ್ಲಿಗೆ ಏಕದಿನ ಕ್ರಿಕೆಟ್‌ನಲ್ಲಿ ಸಚಿನ್ ನಂತರ ಎಲ್ಲವೂ ಕೊಹ್ಲಿಮಯನಾ.?
ಸಚಿನ್‌ಗಿಂತಲೂ ವೇಗವಾಗಿ ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ೪೯ ಶತಕಗಳನ್ನು ಬಾರಿಸಿರೋದು ಅಂಕಿಅAಶಗಳಿAದಲೇ ಫ್ರೂವ್ ಆಗಿ ಬಿಟ್ಟಿದೆ. ಸಚಿನ್ ೪೫೦ ಇನ್ಸಿಂಗ್‌ನಲ್ಲಿ ಈ ಸಾಧನೆ ಮಾಡಿದ್ರೆ, ಕಿಂಗ್‌ಕೊಹ್ಲಿ ಬರೀ ೨೭೭ ಇನ್ನಿಂಗ್ಸ್ಗಳಲ್ಲೆ ಈ ಸಾಧನೆಯನ್ನು ಸರಿ ಗಟ್ಟಿದ್ದಾರೆ... ಅಲ್ಲಿಗೆ ಕ್ರಿಕೆಟ್ ದೇವರ ಬ್ಯಾಟ್‌ಗಿಂತಲೂ ವೇಗವಾಗಿ ವಿರಾಟ್ ಕೊಹ್ಲಿಯ ಬ್ಯಾಟಿನಿಂದ ೪೯ ಶತಕಗಳು ಸಿಡಿದು ಬಿಟ್ಟಿವೆ ಅನ್ನಬಹುದು..?
ಇವತ್ತು ಕೊಹ್ಲಿಯ ಬ್ಯಾಟಿಂಗ್‌ಗೆ ಇಡೀ ವಿಶ್ವ ಕ್ರಿಕೆಟ್‌ನ ದಿಗ್ಗಜರೇ ಫಿದಾ ಆಗಿದ್ದಾರೆ. ಥೇಟ್ ಸಚಿನ್ ಶೈಲಿಯಲ್ಲೇ ಬ್ಯಾಟ್ ಬೀಸುತ್ತಾ, ಮೈದಾನದ ಎಲ್ಲಾ ಮೂಲೆಗಳಿಗೂ ಬಾಲ್‌ನ್ನು ಕಳಿಸುವ ಈ ಚಾಣಾಕ್ಷ ಕ್ರಿಕೆಟ್‌ಟರ್ ಅಂದ್ರೆ, ಅದು ಒನ್ ಅಂಡ್ ಓನ್ಲಿ ವಿರಾಟ್ ಮಾತ್ರ..? ಅದರಲ್ಲೂ ಈ ಪ್ರಸಕ್ತ ವಿಶ್ವಕಪ್ ಕ್ರಿಕೆಟ್‌ನಲ್ಲಿ ಕಿಂಗ್ ಕೊಹ್ಲಿಯ ಬ್ಯಾಟಿಂಗ್‌ಗೇ ಮನಸೋತವರೇಷ್ಟೋ..? ಅಬ್ಬಬ್ಬಾ ನಿಜಕ್ಕೂ ಇವನೊಬ್ಬ ರನ್ ರಾಕ್ಷಸನೇ..? ಅಲ್ಲಿಗೆ ಸಚಿನ್ ಮತ್ತು ವಿರಾಟ್‌ರ ಬ್ಯಾಟಿಂಗ್ ಶೈಲಿಯನ್ನು, ಆಟವನ್ನು ಸೂಕ್ಷö್ಮವಾಗಿ ಅವಲೋಕಿಸಿದಾಗ ಗೊತ್ತಾಗಿದ್ದು ಅದೊಂದೇ...? ಅವ್ರು ಮಾಸ್ಟರ್ ಬ್ಲಾö್ಯಸ್ಟರ್, ಇವ್ರು ಚೇಸಿಂಗ್ ಕಿಂಗ್ ಅಂತ..?