ಟೀ ಬ್ರೇಕ್ ವೇಳೆ ಡೇವಿಡ್ ವಾರ್ನರ್-ಕ್ವಿಂಟನ್ ಡಿ ಕಾಕ್ ನಡುವೆ ನಡೆಯಿತು ವಾರ್!
ಟೀ ಬ್ರೇಕ್ ವೇಳೆ ದ.ಆಫ್ರಿಕಾದ ಕ್ವಿಂಟನ್ ಡಿ ಕಾಕ್ ಪೆವಿಲಿಯನ್ ಗೆ ಮರಳುತ್ತಿದ್ದರು. ಇವರನ್ನೇ ಕಾಯುತ್ತಿದ್ದ ಆಸೀಸ್ ಆರಂಭಿಕ ಡೇವಿಡ್ ವಾರ್ನರ್ ಪೆವಿಲಿಯನ್ ಮೆಟ್ಟಿಲೇರುತ್ತಿದ್ದಾಗ ಜಗಳ ತೆಗೆದಿದ್ದಾರೆ. ಈ ವೇಳೆ ಇಬ್ಬರೂ ವಾಚಮಗೋಚರವಾಗಿ ಕಾದಾಡಿದ್ದಾರೆ.
ಆ ವೇಳೆ ತಂಡದ ಇತರ ಸದಸ್ಯರು ಸಮಾಧಾನಿಸಿ ಇಬ್ಬರನ್ನೂ ಒಳಗೆ ಕರೆಸಿದೆ. ಯಾವ ಕಾರಣಕ್ಕೆ ಘಟೆನ ನಡೆಯಿತು ಎಂದು ತಿಳಿದು ಬಂದಿಲ್ಲ. ಆದರೆ ಈ ಬಗ್ಗೆ ಎರಡೂ ತಂಡಗಳ ವ್ಯವಸ್ಥಾಪಕರು ಸಭೆ ನಡೆಸಿ ಚರ್ಚಿಸಿದ್ದಾರೆ. ಅಷ್ಟೇ ಅಲ್ಲ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಐಸಿಸಿ ತನಿಖೆಗೆ ಆದೇಶಿಸಿದೆ.