ನಮ್ ಜತೆ ಹೇಗೆ ಬ್ಯಾಟಿಂಗ್ ಮಾಡ್ಬೇಕು? ಲಂಕಾ ಆಟಗಾರರಿಗೆ ಧೋನಿ ನೀಡಿದ ಟಿಪ್ಸ್

ಮಂಗಳವಾರ, 26 ಡಿಸೆಂಬರ್ 2017 (10:12 IST)
ನವದೆಹಲಿ: ಶ್ರೀಲಂಕಾ ವಿರುದ್ಧ ಟಿ20 ಸರಣಿ ಭಾನುವಾರ ಮುಕ್ತಾಯಗೊಂಡಿದೆ. ಇದರೊಂದಿಗೆ ಲಂಕಾದ ಭಾರತ ಪ್ರವಾಸವೂ ಕೊನೆಗೊಂಡಿತು. ಆದರೆ ಈ ಸರಣಿಯಲ್ಲಿ ಲಂಕಾ ಆಟಗಾರರ ಪ್ರದರ್ಶನ ತೀರಾ ಕಳಪೆಯಾಗಿತ್ತು.
 

ಸರಣಿಯಲ್ಲಿ ಗೆಲುವನ್ನೇ ಕಾಣದ ಲಂಕಾ ಸೋತು ಸೊರಗಿ ಹೋಗಿತ್ತು. ಸಪ್ಪೆ ಮುಖ ಹೊತ್ತು ನಿಂತಿದ್ದ ಲಂಕಾ ಆಟಗಾರರಿಗೆ ಪಂದ್ಯ ಮುಗಿದ ಬಳಿಕ ಧೋನಿ ಟಿಪ್ಸ್ ಕೊಟ್ಟಿದ್ದಾರೆ.

ಲಂಕಾ ಆಟಗಾರರ ಅವಸ್ಥೆ ನೋಡಲಾಗದೇ ತಾವೇ ಅವರ ಬಳಿ ತೆರಳಿ ಕೆಲವು ಅಮೂಲ್ಯ ಬ್ಯಾಟಿಂಗ್ ಸಲಹೆ ಕೊಟ್ಟಿದ್ದಾರೆ. ಧೋನಿ ನೀಡಿದ ಟಿಪ್ಸ್ ನ್ನು ಲಂಕಾ ಆಟಗಾರರೂ ಶ್ರದ್ಧೆಯಿಂದ ಕೇಳಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ