ಮುಂಬೈ: ನಾಯಕತ್ವ ಹೋಯಿತು. ಮೊದಲಿನ ಚಾರ್ಮ್ ಹೋಯಿತು. ಹೊಸ ಸ್ಟಾರ್ ಗಳು ಬಂದರು. ಇನ್ನು, ಧೋನಿಯನ್ನು ಕೇಳುವವರು ಯಾರು? ಜಾಹೀರಾತುದಾರರೂ ರವಿಚಂದ್ರನ್ ಅಶ್ವಿನ್, ವಿರಾಟ್ ಕೊಹ್ಲಿಯ ಹಿಂದೆ ಓಡುವವರೇ. ಹೀಗಾಗಿ ಧೋನಿಯನ್ನು ಕೇಳೋರೇ ಇಲ್ಲ.
ಇದೀಗ ಬ್ರಾಂಡ್ ಅಂಬಾಸಿಡರ್ ಗಳಾಗುವ ಕ್ರಿಕೆಟಿಗರ ಪೈಕಿ ಅಶ್ವಿನ್ ಮತ್ತು ಕೊಹ್ಲಿ ನಡುವೆ ಫೈಟ್. ಸ್ವಲ್ಪ ಸಮಯ ಮೊದಲು ಧೋನಿ-ಕೊಹ್ಲಿ ನಡುವೆ ಇದ್ದ ಪೈಪೋಟಿ ಇದೀಗ ಈ ಇಬ್ಬರು ಆಟಗಾರರ ಮೇಲೆ ಶಿಫ್ಟ್ ಆಗಿದೆ.
2016 ಸೂಪರ್ ಸ್ಟಾರ್ ಗಳಾದ ಅಶ್ವಿನ್ 15 ಮತ್ತು ಕೊಹ್ಲಿ 17 ಉತ್ಪನ್ನಗಳಿಗೆ ರಾಯಭಾರಿಗಳಾಗಿದ್ದಾರೆ. ಸದ್ಯದಲ್ಲೇ ಐಟಿಡಬ್ಲ್ಯು ಬ್ಲಿಟ್ಸ್ ಸಂಸ್ಥೆಯ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ. ಮುಂದಿನ ಎರಡು ವರ್ಷದಲ್ಲಿ ಅಶ್ವಿನ್ 200 ಕೋಟಿಗೂ ಹೆಚ್ಚು ಸಂಪಾದನೆ ಮಾಡಲಿದ್ದಾರೆ. ಇದರೊಂದಿಗೆ ಅತೀ ಹೆಚ್ಚು ಗುತ್ತಿಗೆ ಪಡೆದ ಆಟಗಾರನಾಗಲಿದ್ದಾರೆ.
ಧೋನಿ ನಾಯಕತ್ವ ತ್ಯಜಿಸಿದ ಮೇಲೆ ಒಪ್ಪಂದಗಳ ವಿಚಾರದಲ್ಲಿ ಅವರ ಬೆಲೆ ಕಡಿಮೆಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅವರು ಹೆಚ್ಚು ಉತ್ಪನ್ನಗಳಿಗೆ ರಾಯಭಾರಿಯಾಗುವ ಸಾಧ್ಯತೆ ಕಡಿಮೆ. ಹೀಗಾಗಿ ಈಗ ಕೊಹ್ಲಿ ಮತ್ತು ಅಶ್ವಿನ್ ನಡುವೇ ಪೈಪೋಟಿ ಇದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ