ರಾಹುಲ್ ದ್ರಾವಿಡ್ ಟೀಂ ಇಂಡಿಯಾ ಕೋಚ್: ಫ್ಯಾನ್ಸ್ ಖುಷ್
ಟೀಂ ಇಂಡಿಯಾಗೆ ಖಾಯಂ ಆಗಿ ದ್ರಾವಿಡ್ ಕೋಚ್ ಆಗಬೇಕೆಂಬುದು ಅಭಿಮಾನಿಗಳ ಕನಸು. ಆದರೆ ಇದುವರೆಗೆ ಅದು ಸಾಧ್ಯವಾಗಿಲ್ಲ. ಈಗಲಾದರೂ ದ್ರಾವಿಡ್ ಕೋಚ್ ಆಗುವ ಮೂಲಕ ನಮ್ಮೆಲ್ಲರ ಕನಸು ನನಸಾಯಿತು ಎಂದು ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ದ್ರಾವಿಡ್ ಕಾರಣಕ್ಕಾಗಿ ಈ ಸರಣಿ ವೀಕ್ಷಿಸಲಿದ್ದೇವೆ ಎಂದು ಕೆಲವರು ಹೇಳಿಕೊಂಡಿದ್ದಾರೆ.