ಟೀಂ ಇಂಡಿಯಾಗೆ ‘ಮನಮೋಹನ್ ಸಿಂಗ್’ ಕೋಚ್ ಬೇಡ ಎಂದ ಅಭಿಮಾನಿಗಳು!

ಗುರುವಾರ, 29 ಜೂನ್ 2017 (08:49 IST)
ಮುಂಬೈ: ವಿರಾಟ್ ಕೊಹ್ಲಿ ಬೆಂಬಲಿತ ಮಾಜಿ ಕ್ರಿಕೆಟಿಗ ರವಿ ಶಾಸ್ತ್ರಿ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಾರೆಂದು ವರದಿಗಳು ಬಂದ ಬೆನ್ನಲ್ಲೇ ಅಭಿಮಾನಿಗಳು ಟ್ವಿಟರ್ ನಲ್ಲಿ ವ್ಯಂಗ್ಯವಾಡಿದ್ದಾರೆ.

 
ರವಿ ಶಾಸ್ತ್ರಿಯನ್ನು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಗೆ ಹೋಲಿಸಿರುವ ಅಭಿಮಾನಿಗಳು ಕೊಹ್ಲಿಯ ಕೈಗೊಂಬೆಯಾಗಲಿರುವ ರವಿ ಶಾಸ್ತ್ರಿ ಟೀಂ ಇಂಡಿಯಾಕ್ಕೆ ಆಯ್ಕೆಯಾಗುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ.

ಒಂದು ವೇಳೆ ರವಿ ಶಾಸ್ತ್ರಿ ಆಯ್ಕೆಯಾದರೆ, ಗಾಂಧಿ ಕುಟುಂಬದ ಕೈಗೊಂಬೆಯೆಂದು ಟೀಕೆಗೊಳಗಾಗಿದ್ದ ಮನಮೋಹನ್ ಸಿಂಗ್ ರಂತೆ ಕೆಲಸ ಮಾಡುತ್ತಾರೆ ಎನ್ನುವುದು ಅಭಿಮಾನಿಗಳ ಅಳಲು. ಅನಿಲ್ ಕುಂಬ್ಳೆಯಂತಹ ಕೆಲಸ ಮಾಡುವ ಕೋಚ್ ಕೊಹ್ಲಿಗೆ ಬೇಕಾಗಿರಲಿಲ್ಲ. ಅದಕ್ಕೇ ಮನಮೋಹನ್ ಸಿಂಗ್ ರಂತೆ ಮೌನವಾಗಿ ಹೇಳಿದ್ದನ್ನು ಪಾಲಿಸುವ ಕೋಚ್ ಗಾಗಿ ಕೊಹ್ಲಿ ಪಟ್ಟು ಹಿಡಿದಿದ್ದಾರೆ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ