ಕೊಹ್ಲಿ ಮಗಳ ಫೋಟೋ ರಿವೀಲ್ ಆಯ್ತು: ಈಗೇನಾದ್ರೂ ಭೂಕಂಪ ಆಯ್ತಾ?!
ವಿಮಾನವೇರುವ ಮುನ್ನ ಎಲ್ಲರ ಕಣ್ಣು ವಮಿಕಾ ಕೊಹ್ಲಿ ಮೇಲಿತ್ತು. ಕೊಹ್ಲಿ ದಂಪತಿ ಇದುವರೆಗೆ ತಮ್ಮ ಮಗಳ ಫೋಟೋ ರಿವೀಲ್ ಮಾಡಿಲ್ಲ. ಸ್ವತಃ ಕೊಹ್ಲಿಯೇ ಮೊನ್ನೆ ಮಾಧ್ಯಮಗಳ ಬಳಿ ಬಂದು ಮಗುವಿನ ಫೋಟೋ ತೆಗೀಬೇಡಿ ಎಂದು ಮನವಿ ಮಾಡಿದ್ದರು.
ಹಾಗಿದ್ದರೂ ಅನುಷ್ಕಾ ತೆಕ್ಕೆಯಲ್ಲಿದ್ದ ಮಗುವಿನ ಮುಖ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೊಹ್ಲಿ ಮಗಳ ಮೊದಲ ಫೋಟೋ ನೋಡಿದ ಕೆಲವರು ಕೊಹ್ಲಿ ದಂಪತಿಗೆ ಟಾಂಗ್ ಕೊಟ್ಟಿದ್ದಾರೆ. ವಮಿಕಾ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಮೊದಲ ಬಾರಿ ರಿವೀಲ್ ಆಯ್ತು. ಇದರಿಂದ ಏನಾದ್ರೂ ಭೂಕಂಪ, ಸುನಾಮಿ ಆಯ್ತಾ? ಎಂದು ಮಗಳ ಮುಖ ತೋರಿಸದೇ ಇಷ್ಟೆಲ್ಲಾ ಸೀಕ್ರೆಟ್ ಮಾಡುತ್ತಿರುವ ಕೊಹ್ಲಿಗೆ ಟಾಂಗ್ ಕೊಟ್ಟಿದ್ದಾರೆ. ಮತ್ತೆ ಕೆಲವರು ಸ್ವತಃ ಕೊಹ್ಲಿಯ ಮಾತಿಗೆ ಗೌರವ ಕೊಟ್ಟು ಈ ಫೋಟೋ ಶೇರ್ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.