ಜೆಟ್ ಏರ್ ವೇಸ್ ಪೈಲಟ್ ವಿರುದ್ಧ ಜನಾಂಗೀಯ ನಿಂದನೆ ದೂರು ನೀಡಿದ ಹರ್ಭಜನ್ ಸಿಂಗ್
ಗುರುವಾರ, 27 ಏಪ್ರಿಲ್ 2017 (07:24 IST)
ನವದೆಹಲಿ: ತಮ್ಮ ಸ್ನೇಹಿತರು ಮತ್ತು ಸಹ ಪ್ರಯಾಣಿಕರ ಮೇಲೆ ಜನಾಂಗೀಯ ನಿಂದನೆ ನಡೆಸಿದ್ದಲ್ಲದೆ, ಹಲ್ಲೆ ನಡೆಸಿದರು ಎಂದು ಜೆಟ್ ಏರ್ ವೇಸ್ ಪೈಲಟ್ ಮೇಲೆ ಕ್ರಿಕೆಟಿಗ ಹರ್ಭಜನ್ ಸಿಂಗ್ ದೂರಿದ್ದಾರೆ.
ಬರ್ನ್ ಡ್ ಹೊಸ್ಲಿನ್ ಎಂಬ ವಿದೇಶಿ ಪೈಲಟ್ ತನ್ನ ಜತೆ ಪ್ರಯಾಣಿಸುತ್ತಿದ್ದ ಭಾರತೀಯ ವ್ಯಕ್ತಿಯನ್ನು ‘ಇಂಡಿಯನ್ ಹೊರಗೆ ಹೋಗು’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ದೈಹಿಕ ಹಲ್ಲೆ ನಡೆಸಿದರು ಎಂದು ಭಜಿ ಸರಣಿ ಟ್ವೀಟ್ ಮಾಡಿ ಘಟನೆಯನ್ನು ವಿವರಿಸಿದ್ದಾರೆ.
ಅಲ್ಲದೆ ಟ್ವೀಟ್ ಮೂಲಕವೇ ಪ್ರಧಾನಿ ಮೋದಿಗೆ ದೂರು ನೀಡಿದ್ದಾರೆ. ಭಜಿ ಟ್ವೀಟ್ ಸುದ್ದಿ ಮಾಡುತ್ತಿದ್ದಂತೆ ಪೈಲಟ್ ನನ್ನು ಅಮಾನತು ಮಾಡಿದ ಜೆಟ್ ಏರ್ ವೇಸ್ ತನಿಖೆಗೆ ಆದೇಶಿಸಿದೆ. ಅಲ್ಲದೆ ಹಲ್ಲೆಗೊಳಗಾದ ಪ್ರಯಾಣಿಕನ ಕ್ಷಮೆ ಕೋರಿದೆ.
‘ನಮ್ಮ ದೇಶದಲ್ಲಿದ್ದುಕೊಂಡೇ ನಮ್ಮ ದೇಶದವರನ್ನು ಕೀಳಾಗಿ ಮಾತನಾಡಲು ಆತನಿಗೆಷ್ಟು ಧೈರ್ಯ? ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಭಜಿ ಟ್ವಿಟರ್ ನಲ್ಲಿ ಪ್ರಧಾನಿ ಮೋದಿಗೆ ಒತ್ತಾಯಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ