ಹಾರ್ದಿಕ್ ಪಾಂಡ್ಯಗೆ ಯಾಕೆ ಬ್ರೇಕ್? ‘ಅದಕ್ಕಾ?...!’ ಟ್ರೋಲ್ ಮಾಡಿದ ಟ್ವಿಟರಿಗರು

ಸೋಮವಾರ, 22 ಜುಲೈ 2019 (09:15 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್, ಏಕದಿನ ಮತ್ತು ಟಿ20 ಸರಣಿಗೆ ಟೀಂ ಇಂಡಿಯಾ ಆಯ್ಕೆ ಮಾಡಿದ್ದು, ಅಚ್ಚರಿಯೆಂಬಂತೆ ಹಾರ್ದಿಕ್ ಪಾಂಡ್ಯಗೆ ಕೊಕ್ ನೀಡಲಾಗಿದೆ. ಇದನ್ನು ನೋಡಿ ಟ್ವಿಟರಿಗರು ಟ್ರೋಲ್ ಮಾಡಿದ್ದಾರೆ.


ಹಾರ್ದಿಕ್ ಪಾಂಡ್ಯ ಕಾಫಿ ವಿತ್ ಕರಣ್ ಶೋನಲ್ಲಿ ಹುಡುಗಿಯರ ಜತೆ ಸಂಬಂಧ ಹೊಂದುವ ಕುರಿತಾಗಿ ಅಶ್ಲೀಲವಾಗಿ ಮಾತನಾಡಿದ್ದರು. ಇದರಿಂದಾಗಿ ಕೆಲವು ದಿನಗಳ ಕಾಲ ಕ್ರಿಕೆಟ್ ನಿಂದಲೂ ನಿಷೇಧಕ್ಕೊಳಗಾಗಿದ್ದರು.

ಇದೇ ಘಟನೆಯನ್ನು ಕೆದಕಿ ಈಗ ಟ್ವಿಟರಿಗರು ಹಾರ್ದಿಕ್ ಪಾಂಡ್ಯರನ್ನು ಟ್ರೋಲ್ ಮಾಡಿದ್ದಾರೆ. ಟ್ವಿಟರಿಗರೊಬ್ಬರಂತೂ ‘ಪಾಂಡ್ಯಗೆ ಯಾಕೆ ಬ್ರೇಕ್? ‘ಅದಕ್ಕಾ...?’ ಎಂದು ಕಾಲೆಳೆದಿದ್ದಾರೆ. ಮತ್ತೆ ಕೆಲವರು ಇದ್ದಕ್ಕಿದ್ದಂತೆ ಪಾಂಡ್ಯಗೆ ಕೊಕ್ ನೀಡಿದ್ದೇಕೆ ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಪಾಂಡ್ಯಗೆ ಕೊಕ್ ನೀಡಿದ್ದಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ