ಟೀಂ ಇಂಡಿಯಾ ಪ್ರಾಕ್ಟೀಸ್ ಗೆ ಬರಲಿರುವ ಸ್ಪೆಷಲ್ ಗೆಸ್ಟ್!

ಶನಿವಾರ, 14 ಡಿಸೆಂಬರ್ 2019 (08:42 IST)
ವಿಶಾಖಪಟ್ಟಣ: ವೆಸ್ಟ್ ಇಂಡೀಸ್ ವಿರುದ್ದ ದ್ವಿತೀಯ ಏಕದಿನ ಪಂದ್ಯಕ್ಕೆ ಟೀಂ ಇಂಡಿಯಾ ನೆಟ್ ಪ್ರಾಕ್ಟೀಸ್ ಮಾಡುವಾಗ ವಿಶೇಷ ಬೌಲರ್ ಒಬ್ಬರು ಅತಿಥಿಯಾಗಲಿದ್ದಾರೆ.


ಅವರು ಬೇರೆ ಯಾರೂ ಅಲ್ಲ ವೇಗಿ ಜಸ್ಪ್ರೀತ್ ಬುಮ್ರಾ. ಕಳೆದ ಕೆಲವು ದಿನಗಳಿಂದ ಬುಮ್ರಾ ಗಾಯದಿಂದಾಗಿ ಟೀಂ ಇಂಡಿಯಾ ಪರ ಆಡಿಲ್ಲ. ಮುಂದಿನ ವರ್ಷ ಆರಂಭದಲ್ಲೇ ಟೀಂ ಇಂಡಿಯಾ ನ್ಯೂಜಿಲೆಂಡ್, ಆಸ್ಟ್ರೇಲಿಯಾ ವಿರುದ್ಧ ಪ್ರಮುಖ ಟೆಸ್ಟ್ ಸರಣಿ ಆಡಲಿದೆ.

ಹೀಗಾಗಿ ಇದಕ್ಕೂ ಮೊದಲು ಬುಮ್ರಾರನ್ನು ತಯಾರು ಮಾಡುವ ಉದ್ದೇಶದಿಂದ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಅವರನ್ನು ನೆಟ್ ಬೌಲರ್ ಆಗಿ ಪರೀಕ್ಷಿಸಲು ಹೊರಟಿದೆ. ಈ ಮೂಲಕ ಬುಮ್ರಾಗೂ ಪ್ರಾಕ್ಟೀಸ್ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ