ಒಬ್ಬ ಕನ್ನಡಿಗನಿಗಾಗದ್ದನ್ನು ಇನ್ನೊಬ್ಬ ಕನ್ನಡಿಗ ಸಾಧಿಸಿದ! ಇದುವೇ ಕನ್ನಡಿಗರ ಶಕ್ತಿ!

ಸೋಮವಾರ, 19 ಡಿಸೆಂಬರ್ 2016 (14:34 IST)
ಚೆನ್ನೈ: ಚೆನ್ನೈಯಲ್ಲಿ ಇಂದೂ ಕೂಡಾ ಕನ್ನಡಿಗರ ಪಾರುಪತ್ಯ. ನಿನ್ನೆ ದಿನವಿಡೀ ಬ್ಯಾಟಿಂಗ್ ನಡೆಸಿ ದ್ವಿಶತಕದ ಹೊಸ್ತಿಲಲ್ಲಿ ಎಡವಿದ್ದ ಕೆಎಲ್ ರಾಹುಲ್ ನಿರಾಸೆ ಮೂಡಿಸಿದ್ದರೆ, ಇಂದು ಇನ್ನೋರ್ವ ಕನ್ನಡಿಗ ಕರುಣ್ ನಾಯರ್ ಆ ತಪ್ಪು ಮರುಕಳಿಸದಂತೆ ನೋಡಿಕೊಂಡರು. ಟೆಸ್ಟ್ ಕ್ರಿಕೆಟ್ ನಲ್ಲಿ ಚೊಚ್ಚಲ ದ್ವಿಶತಕ ಗಳಿಸಿದರು.

ವಿಶೇಷವೆಂದರೆ ಈ ಪಂದ್ಯದಲ್ಲಿ ಅಬ್ಬರಿಸಿದ ಇಬ್ಬರೂ ಕನ್ನಡಿಗರೇ ಎಂಬುದು ವಿಶೇಷ. ನಿನ್ನೆ ಕೆಎಲ್ ರಾಹುಲ್ ಜತೆಗೆ ಬ್ಯಾಟಿಂಗ್ ಆರಂಭಿಸಿದ್ದ ಕರುಣ್ ಇಂದು ಮುರಳಿ ವಿಜಯ್, ರವಿಚಂದ್ರನ್ ಅಶ್ವಿನ್ ಗೆ ತಮ್ಮ ಇನಿಂಗ್ಸ್ ವಿಸ್ತರಿಸಿದರು. ವಿಶೇಷವೆಂದರೆ ಇವರಿಬ್ಬರೂ ತಮಿಳು ನಾಡಿನ ಆಟಗಾರರು. ಈ ಟೆಸ್ಟ್ ಸರಣಿ ಮುಗಿದ ಮೇಲೆ ಇದೇ ತಮಿಳುನಾಡಿನ ಆಟಗಾರರ ವಿರುದ್ಧ ಇವರಿಬ್ಬರೂ ಕನ್ನಡಿಗ ಆಟಗಾರರು ರಣಜಿ ಟ್ರೋಫಿ ಆಡಬೇಕು.

ಅದೆಲ್ಲಾ ಇರಲಿ, ಕರುಣ್ ಆಟ ಇಂದು ಅದ್ಭುತವಾಗಿತ್ತು. ಈ ರೀತಿ ಮೊದಲ ಶತಕವನ್ನು ದ್ವಿಶತಕವಾಗಿ ಮಾಡಿದ ಮೂರನೇ ಕ್ರಿಕೆಟಿಗ ಎಂಗ ಗೌರವಕ್ಕೆ ಕರುಣ್ ಪಾತ್ರರಾದರು. ಯಾವುದೇ ಕ್ಷಣದಲ್ಲೂ ಅವರು ಗಲಿಬಿಲಿಗೊಳಗಾದಂತೆ ಕಾಣಲಿಲ್ಲ. ಯಾವ ಬೌಲರ್ ಗಳಿಗೂ ಅವರು ಅಳುಕಲಿಲ್ಲ. ಒಟ್ಟಾರೆ ಎಸೆತ ಎದುರಿಸಿದ ಅವರು ಜವಾಬ್ದಾರಿಯುತವಾಗಿ ಆಡಿ ದ್ವಿಶತಕ ಗಳಿಸದ್ದಲ್ಲದೆ ತಂಡಕ್ಕೆ ಇನಿಂಗ್ಸ್ ಮುನ್ನಡೆಯನ್ನೂ ಕೊಡಿಸಿದರು.

ಬ್ಯಾಕ್ ಫೂಟ್, ಫ್ರಂಟ್ ಫೂಟ್ ಎಲ್ಲಾ ರೀತಿಯ ಟೆಕ್ನಿಕಲ್ ನಲ್ಲೂ ಅವರು ಪ್ರಬಲರಾಗಿದ್ದರು. ಎದುರಾಳಿಗೆ ಯಾವುದೇ ಚಾನ್ಸ್ ಕೊಡಲಿಲ್ಲ. ಇದರಿಂದಾಗಿ ನಿನ್ನೆ ದ್ವಿಶತಕ ವಂಚಿತರಾಗಿ ಕನ್ನಡಿಗರಿಗೆ ನಿರಾಸೆ ಮೂಡಿಸಿದ್ದ ರಾಹುಲ್ ಬದಲಿಗೆ ಇಂದು ಕರುಣ್ ನಗು ಮೂಡಿಸಲು ಕಾರಣರಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ