ಕರುಣ್ ನಾಯರ್ ತ್ರಿಶತಕ!

ಸೋಮವಾರ, 19 ಡಿಸೆಂಬರ್ 2016 (16:23 IST)
ಚೆನ್ನೈ: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ಕರ್ನಾಟಕದ ಕರುಣ್ ನಾಯರ್ ತ್ರಿಶತಕ ಗಳಿಸಿದ್ದಾರೆ. ಇದರೊಂದಿಗೆ ತ್ರಿಶತಕ ಭಾರಿಸಿದ ಭಾರತದ ಎರಡನೇ ಕ್ರಿಕೆಟಿಗ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದೇ ಮೈದಾನದಲ್ಲಿ ವೀರೇಂದ್ರ ಸೆಹ್ವಾಗ್ ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಎರಡನೇ ಬಾರಿ ತ್ರಿಶತಕ ಬಾರಿಸಿದ್ದರು. ದ.ಆಫ್ರಿಕಾ ವಿರುದ್ಧ ಅವರು 319 ರನ್ ಗಳಿಸಿದ್ದು, ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತೀಯನೊಬ್ಬ ಗಳಿಸಿದ ಗರಿಷ್ಠ ರನ್ ಇದಾಗಿದೆ. ಇದಲ್ಲದೆ ಪಾಕ್ ವಿರುದ್ಧ ಮುಲ್ತಾನ್ ನಲ್ಲೂ ಸೆಹ್ವಾಗ್ ತ್ರಿಶತಕ ಗಳಿಸಿದ್ದರು.

ಇದೀಗ ಕರುಣ್ ತ್ರಿಶತಕ ಗಳಿಸಿದ ಎರಡನೇ ಭಾರತೀನೆನಿಸಿದ್ದಾರೆ. 31 ಬೌಂಡರಿ ಮತ್ತು 4 ಸಿಕ್ಸರ್ ಗಳ ನೆರವಿನೊಂದಿಗೆ ನಾಯರ್ ಅಜೇಯರಾಗಿ ಉಳಿದರು. ದೇಶೀಯ ಕ್ರಿಕೆಟ್ ನಲ್ಲೂ ಕರುಣ್ ತ್ರಿಶತಕ ಗಳಿಸಿದ ದಾಖಲೆ ಮಾಡಿದ್ದಾರೆ. ಸೆಹ್ವಾಗ್ ಗರಿಷ್ಠ ರನ್ ಮಾಡಿದ ಅದೇ ಮೈದಾನದಲ್ಲಿ ಕರುಣ್ ತ್ರಿಶತಕ ಗಳಿಸಿದ್ದು  ವಿಶೇಷವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ