ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ ಕಳಪೆ ಫಾರ್ಮ್ ನಲ್ಲಿದ್ದ ಪೃಥ್ವಿ ಶಾರನ್ನು ಆರಂಭಿಕರಾಗಿ ಕಣಕ್ಕಿಳಿಸಿ ಕೈ ಸುಟ್ಟುಕೊಂಡರೂ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗೆ ಬುದ್ಧಿ ಬಂದಂತೆ ಕಾಣುತ್ತಿಲ್ಲ. ಇದೀಗ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಮತ್ತೊಂದು ಮೂರ್ಖತನದ ನಿರ್ಧಾರ ತೆಗೆದುಕೊಳ್ಳುವ ಸುದ್ದಿ ಬಂದಿದೆ.
ಪೃಥ್ವಿ ಶಾ ಸ್ಥಾನಕ್ಕೆ ನಾಳೆಯಿಂದ ಆರಂಭವಾಗಲಿರುವ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಶಬ್ನಂ ಗಿಲ್ ರನ್ನು ಕಣಕ್ಕಿಳಿಸಲಾಗುತ್ತದೆ. ವೃದ್ಧಿಮಾನ್ ಸಹಾ ಬದಲಿಗೆ ರಿಷಬ್ ಪಂತ್ ವಿಕೆಟ್ ಕೀಪರ್ ಆಗುವ ಸಾಧ‍್ಯತೆಯಿದೆ. ಇದೆಲ್ಲಾ ಸರಿ, ಆದರೆ ವಿರಾಟ್ ಕೊಹ್ಲಿ ಸ್ಥಾನಕ್ಕೆ ಅನುಭವಿ ಕೆಎಲ್ ರಾಹುಲ್ ರಂತಹ ಬ್ಯಾಟ್ಸ್ ಮನ್ ನ್ನು ಕರೆತರುವುದು ಬಿಟ್ಟು, ಟೀಂ ಇಂಡಿಯಾ ರವೀಂದ್ರ ಜಡೇಜಾರನ್ನು ಆಡುವ ಬಳಗದಲ್ಲಿ ಸೇರಿಸಿಕೊಳ್ಳುವ ಚಿಂತನೆ ನಡೆಸಿದೆ. ಜಡೇಜಾಗೆ ತಂಡದಲ್ಲಿ ಸ್ಥಾನ ನೀಡುವುದು ಉತ್ತಮವೇ. ಆದರೆ ಕೊಹ್ಲಿಯಂದ ತೆರವಾದ ಸ್ಥಾನಕ್ಕೆ ಒಬ್ಬ ಅತ್ಯುತ್ತಮ ಬ್ಯಾಟ್ಸ್ ಮನ್ ಅಗತ್ಯವಿದೆ. ಒಂದು ವೇಳೆ ಜಡೇಜಾಗೆ ಸ್ಥಾನ ನೀಡಲೇಬೇಕೆಂದರೆ ಹನುಮ ವಿಹಾರಿ ಸ್ಥಾನಕ್ಕೆ ಅವರನ್ನು ಕರೆತರಬಹುದಿತ್ತು. ಆದರೆ ರಾಹುಲ್ ರನ್ನು ಹೊರಗಿಟ್ಟರೆ ಅದಕ್ಕಿಂತ ಕೆಟ್ಟ ನಿರ್ಧಾರ ಇನ್ನೊಂದಿರದು.