ಮಹಿಳಾ ಕ್ರಿಕೆಟ್ ಬಗ್ಗೆ ಏನೋ ಹೇಳಲು ಹೋಗಿ ಮಂಗಳಾರತಿ ಮಾಡಿಸಿಕೊಂಡ ಪಾಕ್ ಆಟಗಾರ

ಬುಧವಾರ, 5 ಜುಲೈ 2017 (09:35 IST)
ಕರಾಚಿ: ಮಹಿಳಾ ಕ್ರಿಕೆಟ್ ಬಗ್ಗೆ ಏನೋ ಅಭಿಪ್ರಾಯ ಹೇಳಲು ಹೋದ ಪಾಕ್ ಮಾಜಿ ವೇಗಿ ವಕಾರ್ ಯೂನಸ್ ಇದೀಗ ಮೈ ಮೇಲೆ ಇರುವೆ ಬಿಟ್ಟವರ ಹಾಗಾಡುತ್ತಿದ್ದಾರೆ. ಟ್ವಿಟರ್ ನಲ್ಲಿ ಅವರನ್ನು  ಅಭಿಮಾನಿಗಳು ಇದೀಗ ಹಿಗ್ಗಾ ಮುಗ್ಗಾ ಜಾಡಿಸುತ್ತಿದ್ದಾರೆ.


‘ಮಹಿಳಾ ಕ್ರಿಕೆಟ್ ವಿಶ್ವಕಪ್ ನಲ್ಲಿ 50 ಓವರ್ ಬದಲು 30 ಓವರ್ ಇದ್ದರೆ ಹೇಗೆ? ಟೆನಿಸ್ ನಂತೆ 5 ಸೆಟ್ ನ ಬದಲು ಮೂರು ಸೆಟ್ ಇರಲಿ’ ಎಂದು ವಕಾರ್ ಟ್ವಿಟರ್ ನಲ್ಲಿ ಅಭಿಪ್ರಾಯ ಹಂಚಿದ್ದರು. ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಮಹಿಳೆಯರಿಗೆ ಪುರುಷ ಕ್ರಿಕೆಟ್ ತಂಡದಲ್ಲಿ ಆಡುವ ಆಟಗಾರರನ್ನು 9 ತಿಂಗಳು ಹೊತ್ತು ಭೂಮಿಗೆ ತರಲು ಸಾಧ್ಯ ಎಂದ ಮೇಲೆ ಮತ್ತೆ ಹೆಚ್ಚುವರಿ 20 ಓವರ್ ಆಡಲೂ ಸಾಧ್ಯವಿದೆ ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ನಿಮಗೆ ಅಷ್ಟು ಚಿಂತೆಯಾಗಿದ್ದರೆ ಪುರುಷರ ಕ್ರಿಕೆಟ್ ನಲ್ಲಿ ಓವರ್ ಕಡಿತಗೊಳಿಸಿ ಎಂದು ಜಾಡಿಸಿದ್ದಾರೆ.

ಇಷ್ಟೆಲ್ಲಾ ಆದ ಮೇಲೆ ವಕಾರ್ ತಮ್ಮ ವರಸೆ ಬದಲಿಸಿದ್ದು, ನಾನು ಮಹಿಳೆಯರನ್ನು ಕೀಳಾಗಿ ನೋಡಿ ಈ ಮಾತು ಹೇಳಿಲ್ಲ. ಮಹಿಳಾ ಕ್ರಿಕೆಟ್ ನ್ನು ಮತ್ತಷ್ಟು ಜನಪ್ರಿಯಗೊಳಿಸಲು ಇಂತಹದ್ದೊಂದು ಐಡಿಯಾ ನೀಡಿದ್ದೆನಷ್ಟೇ ಎಂದು ಸಮಜಾಯಿಷಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ