ಭಾರತೀಯ ಯುವತಿಯನ್ನು ವಿವಾಹವಾಗಲಿರುವ ಪಾಕ್ ಕ್ರಿಕೆಟಿಗ ಹಸನ್ ಅಲಿ

ಬುಧವಾರ, 31 ಜುಲೈ 2019 (10:12 IST)
ನವದೆಹಲಿ: ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾರನ್ನು ವಿವಾಹವಾಗಿದ್ದು ಭಾರೀ ಸುದ್ದಿಯಾಗಿತ್ತು. ಈಗ ಮತ್ತೊಬ್ಬ ಪಾಕ್ ಕ್ರಿಕೆಟಿಗ ಭಾರತೀಯ ಯುವತಿಯನ್ನು ವಿವಾಹವಾಗಲು ಸಿದ್ಧರಾಗಿದ್ದಾರೆ.


ಪಾಕ್ ಕ್ರಿಕೆಟಿಗ ಹಸನ್ ಅಲಿ ಹರ್ಯಾಣ ಮೂಲದ ಶಾಮಿಯಾ ಅರ್ಜೂ ಎಂಬ ಯುವತಿಯನ್ನು ವಿವಾಹವಾಗಲಿದ್ದಾರೆ. ಈ ಬಗ್ಗೆ ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದಿದೆ.

ಶಾಮಿಯಾ ದುಬೈನಲ್ಲಿ ಫ್ಲೈಟ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇದು ಪಕ್ಕಾ ಅರೇಂಜ್ಡ್ ಮ್ಯಾರೇಜ್ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ